Home » ಮನರಂಜನೆಗೆ ಇಸ್ಪೀಟ್ ಆಡುವುದರಲ್ಲಿ ತಪ್ಪೇನಿಲ್ಲ
 

ಮನರಂಜನೆಗೆ ಇಸ್ಪೀಟ್ ಆಡುವುದರಲ್ಲಿ ತಪ್ಪೇನಿಲ್ಲ

ಸುಪ್ರೀಂ ಕೋರ್ಟ್

by Kundapur Xpress
Spread the love

ನವದೆಹಲಿ : ಜೂಜಾಟ ಮತ್ತು ಬೆಟ್ಟಿಂಗ್ ಇಲ್ಲದೆ ಕೇವಲ ಮನರಂಜನೆಗಾಗಿ ಮತ್ತು ವಿರಾಮದ ವೇಳೆಯಲ್ಲಿ ಇಸ್ಪೀಟ್ ಆಡುವುದು ನೈತಿಕ ಭ್ರಷ್ಟತೆಯಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹನುಮಂತರಾಯಪ್ಪ ವೈ.ಸಿ. ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟೇಶ್ವರ್ ಸಿಂಗ್ ಅವರಿದ್ದ ಪೀಠ, ‘ಈ ಪ್ರಕರಣದಲ್ಲಿ ಆರೋಪಿ ನೈತಿಕ ಭ್ರಷ್ಟತೆ ನಡೆಸಿದ್ದಾರೆ ಎಂದು ಒಪ್ಪಿಕೊಳ್ಳಲು ಕಷ್ಟವಾಗಿದೆ. ನೈತಿಕ ಭ್ರಷ್ಟತೆ ಎಂಬ ಪದ ಕಾನೂನು ಮತ್ತು ಸಾಮಾಜಿಕ ವಲಯದಲ್ಲಿ ಸ್ವಾಭಾವಿಕವಾಗಿ ಕೀಳು, ದುಷ್ಟ, ಭ್ರಷ್ಟ ಎಂಬುದನ್ನು ತೋರಿಸಲು ಬಳಸಲಾಗುತ್ತದೆ.

ಇಸ್ಪೀಟ್ ಆಡುವುದರಲ್ಲಿ ಹಲವು ರೂಪಗಳಿವೆ. ಪ್ರತಿಯೊಂದು ರೂಪದ ಇಸ್ಪೀಟ್ ಆಟ ನೈತಿಕ ಭ್ರಷ್ಟತೆಯಾಗಿರುವುದಿಲ್ಲ. ದೇಶದ ಹಲವೆಡೆ ಜೂಜಾಟ ಅಥವಾ ಬೆಟ್ಟಿಂಗ್ ಇಲ್ಲದೆ ಮನರಂಜನೆ ಮತ್ತು ವಿರಾಮಕ್ಕಾಗಿ ಇಸ್ಪೀಟ್ ಆಡಲಾಗುತ್ತದೆ ಎಂದು ಕೋರ್ಟ್ ಹೇಳಿದೆ

 

Related Articles

error: Content is protected !!