ಹೊಸದಿಲ್ಲಿ : ದೀಪಾವಳಿ ಹಬ್ಬದ ಸಂತೋಷದ ಸಮಯದಲ್ಲಿ ಪ್ರೀತಿಯ ದ್ಯೋತಕವಾಗಿ ಭಾರತ ಮತ್ತು ಚೀನಾದ ಸೈನಿಕರು ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಹಲವು ಗಡಿ ಭಾಗಗಳಲ್ಲಿ ಸಿಹಿತಿಂಡಿ ವಿನಿಮಯ ಮಾಡಿಕೊಂಡರು.
ಪೂರ್ವ ಲಡಾಖ್‌ನ ಡೆಟ್ಟೋಕ್ ಮತ್ತು ಡೆಪ್ಲಾಂಗ್ ಬಯಲು ಪ್ರದೇಶದಲ್ಲಿ ಎರಡು ಘರ್ಷಣೆಯ ಬಿಂದುಗಳಲ್ಲಿ ಉಭಯ ದೇಶಗಳು ಕದನ ವಿರಾಮ ಘೋಷಿಸಿದ ನಂತರ ಸಿಹಿ ಹಂಚಿಕೊಂಡರು. ಇದು ಚೀನಾ-ಭಾರತದ ಸಂಬಂಧಗಳಲ್ಲಿ ಹೊಸ ಭಾಷ್ಯವನ್ನು ತಂದುಕೊಡಲಿದೆ ಎಂದು ವಿಶ್ಲೇಷಿಸಲಾಗಿದೆ
ಭಾರತ ಮತ್ತು ಚೀನಾದ ಸೈನಿಕರ ನಡುವೆ ಸಿಹಿ ವಿನಿಮಯವು ದೀಪಾವಳಿಯ ಸಂದರ್ಭದಲ್ಲಿ ಗಡಿ ವಾಸ್ತವ ರೇಖೆಯುದ್ದಕ್ಕೂ ಹಲವು ಗಡಿ ಬಿಂದುಗಳಲ್ಲಿ ನಡೆಯಿತು ಎಂದು ಸೇನಾ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಗಡಿ ವಾಸ್ತವ ರೇಖೆಯ ಉದ್ದಕ್ಕೂ ಐದು ಬಾರ್ಡರ್ ಪರ್ಸನಲ್ ಮೀಟಿಂಗ್ (ಬಿಪಿಎಂ) ಪಾಯಿಂಟ್ ಗಳಲ್ಲಿ ಸಿಹಿತಿಂಡಿಗಳ ವಿನಿಮಯ ನಡೆದಿದೆ ಎಂದು ಮೂಲಗಳು ತಿಳಿಸಿವೆ.