ನ್ಯೂ ಓರ್ಲೀನ್ಸ್ : ಹೊಸ ವರ್ಷದ ಸಂಭ್ರಮಾ ಚರಣೆಯಲ್ಲಿದ್ದ ಜನಸಮೂಹದ ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಪಿಕಪ್ ಟ್ರಕ್ ಹರಿಸಿದ ಆಘಾತಕಾರಿ ಘಟನೆ ಅಮೆರಿಕದ ನ್ಯೂ ಓರ್ಲೀನ್ಸ್ ನಲ್ಲಿ ಮಂಗಳವಾರ ನಡೆದಿದೆ. ಘಟನೆಯಲ್ಲಿ 10 ಜನರು ಸಾವನ್ನಪ್ಪಿ, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳ ಗುಂಡಿಗೆ ದಾಳಿಕೋರ ಬಲಿಯಾಗಿದ್ದಾನೆ.
ಈ ನಡುವೆ ಘಟನೆಯನ್ನು ಭಯೋತ್ಪಾದಕ ಕೃತ್ಯ ಎಂದು ನ್ಯೂ ಓರ್ಲೀನ್ಸ್‌ನ ಮೇಯರ್ ಹೇಳಿದ್ದಾರೆ. ಎಫ್‌ಬಿಐ ಕೂಡಾ ಅದೇ ಆಯಾಮದಲ್ಲಿ ತನಿಖೆ ಆರಂಭಿಸಿದೆ. ಜೊತೆಗೆ ಘಟನಾ ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಇಟ್ಟಿರಬಹುದಾದ ಸುಧಾರಿತ ಸ್ಪೋಟಕಗಳಿಗೆ ಹುಡುಕಾಟ ಆರಂಭಿಸಿದೆ.