Home » ವಿದ್ಯೆ ಕಲಿಯಲು ಪಾಕ್‌ಗೆ ಹೋಗಿ ಉಗ್ರನಾದ ಆದಿಲ್
 

ವಿದ್ಯೆ ಕಲಿಯಲು ಪಾಕ್‌ಗೆ ಹೋಗಿ ಉಗ್ರನಾದ ಆದಿಲ್

by Kundapur Xpress
Spread the love

ನವದೆಹಲಿ : ಪಹಲ್ಗಾಮ್ ದಾಳಿಯ ಮಾಸ್ಟ‌ರ್ಮೈಂಡ್ ಆದಿಲ್ ಥೋಕರ್ ಮೂಲತಃ ಕಾಶ್ಮೀರದ ಅನಂತನಾಗ್ ಜಿಲ್ಲೆಯವ ವಿದ್ಯಾಭ್ಯಾಸಕ್ಕಾಗಿ ಪಾಕಿಸ್ತಾನಕ್ಕೆ ತೆರಳಿ, ಉಗ್ರನಾಗಿ ಮರಳಿದ್ದ ಎಂದು ತಿಳಿದುಬಂದಿದೆ.

ವಿದ್ಯಾರ್ಥಿ ವೀಸಾ ಪಡೆದು 2018ರಲ್ಲಿ ಪಾಕ್‌ಗೆ ಹೋಗಿದ್ದ ಆದಿಲ್‌ನ ಮನಃಸ್ಥಿತಿ, ಮೊದಲೇ ಉಗ್ರವಾದದ ಹಾದಿ ಹಿಡಿಯುವ ಸೂಚನೆ ನೀಡುವಂತಿತ್ತು. ಅದಕ್ಕೆ ಪೂರಕವಾಗಿ ಆತ ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಪಾಕ್ ತಲುಪಿ ಪರಿವಾರದೊಂದಿಗಿನ ಸಂಪರ್ಕ ಕಡಿದುಕೊಂಡ ಆದಿಲ್, 8 ತಿಂಗಳು ನಾಪತ್ತೆಯಾದ. ಈ ವೇಳೆ ಲಷ್ಕರ್‌ನಿಂದ ಸೈನಿಕ, ಸೈದ್ಧಾಂತಿಕ ತರಬೇತಿ ಪಡೆಯುತ್ತಿದ್ದ ಎಂಬ ಶಂಕೆಯಿದೆ.

 2024ರಲ್ಲಿ ಗಡಿ ನುಸುಳಿ ಭಾರತಕ್ಕೆ ಬಂದ ಆದಿಲ್, ಜತೆಯಲ್ಲಿ ಪಾಕ್ ಪ್ರಜೆಯಾದ ಹಶೀಂ ಮೂಸಾ ಸೇರಿ ಮೂರ್ನಾಲ್ಕು ಉಗ್ರರನ್ನು ಕರೆತಂದಿದ್ದ. ಬಳಿಕ ಸ್ಥಳೀಯ ಉಗ್ರರ ಸಂಪರ್ಕವನ್ನು ಮತ್ತೆ ಸಾಧಿಸಿದ್ದ ಎನ್ನಲಾಗಿದೆ.

 

Related Articles

error: Content is protected !!