141
ಹೊಸದಿಲ್ಲಿ : ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಮೇಲೆ ದಾಳಿ ನಡೆಸಲು ಪಾಕ್ ಐಎಸ್‌ಐ ಬೆಂಬಲಿತ ಉಗ್ರನೊಬ್ಬ ಹೂಡಿದ್ದ ಸಂಚನ್ನು ವಿಫಲಗೊಳಿಸಲಾಗಿದ್ದು, ಈ ಸಂಬಂಧ ಫರೀದಾಬಾದ್‌ನಲ್ಲಿ ಶಂಕಿತ ಉಗ್ರನೊಬ್ಬನನ್ನು ಬಂಧಿಸಲಾಗಿದೆ.
ಈತನಿಂದ ಎರಡು ಹ್ಯಾಂಡ್ ಗ್ರೆನೇಡ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಕೇಂದ್ರ ಏಜನ್ಸಿಗಳ ಮಾಹಿತಿ ಮೇರೆಗೆ ಗುಜರಾತ್ ಎಟಿಎಸ್ ಮತ್ತು ಫರೀದಾಬಾದ್ ವಿಶೇಷ ಕಾರ್ಯಪಡೆ, ಶಂಕಿತ ಉಗ್ರ, ಉತ್ತರ ಪ್ರದೇಶದ ನಿವಾಸಿ ಅಬ್ದುಲ್ ರೆಹಮಾನ್ನನ್ನು ಬಂಧಿಸಿದೆ. ಈತ ಪಾಕಿಸ್ತಾನದ ಐಎಸ್‌ಐ ಜತೆಗೆ ನೇರವಾಗಿ ಸಂಪರ್ಕ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಈತ ಫೈಜಾಬಾದ್‌ನಲ್ಲಿ ಮಟನ್ ಅಂಗಡಿ ಜತೆಗೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ

