ಶ್ರೀನಗರ : ಜಮ್ಮು-ಕಾಶ್ಮೀರದ ಗಗಾಂಗೀರ್ನ ಸುರಂಗ ನಿರ್ಮಾಣ ಸ್ಥಳದ ಬಳಿ ಅಕ್ಟೋಬರ್‌ನಲ್ಲಿ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಲಷ್ಕರ್-ಎ-ತೈಬಾ ಭಯೋತ್ಪಾದಕನನ್ನು ಮಂಗಳವಾರ ದಚಿಗಮ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರ ಜುನೈದ್ ಅಹ್ಮದ್ ನನ್ನು ಹೊಡೆದುರುಳಿಸಲಾಗಿದೆ.
ಗುಪ್ತಚರ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಸೋಮವಾರ ರಾತ್ರಿ ದಚಿಗಾಮ್ ನ ಮೇಲ್ಬಾಗದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ಮಂಗಳವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಎಲ್ ಇಟಿ ಉಗ್ರ ಜುನೈದ್ ಅಹ್ಮದ್ ಭಟ್‌ನನ್ನು ಸದೆಬಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಷ್ಕರ್-ಎ-ತೈಬಾದ ಎ ವರ್ಗದ ಭಯೋತ್ಪಾದಕನಾದ ಜುನೈದ್ ಅ.20ರಂದು ಗಂಡರ್ಬಾಲ್ ನ ಗಗಾಂಗೀರ್ ಪ್ರದೇಶದ ಸುರಂಗ ನಿರ್ಮಾಣ ಸ್ಥಳದ ಬಳಿ ನಡೆದ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಮೋಸ್ಟ್ ವಾಂಟೆಂಡ್ ಪಟ್ಟಿಯಲ್ಲಿದ್ದ ಈ ಗುಂಡಿನ ದಾಳಿ ವೇಳೆ ಸ್ಥಳೀಯ ವೈದ್ಯರು ಮತ್ತು ಆರು ವಲಸೆ ಕಾರ್ಮಿಕರು ಮೃತಪಟ್ಟಿದ್ದರು.