155
ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಅಪರಿಚಿತ ದಾಳಿಕೋರರು ಭಯೋತ್ಪಾದಕ ಸಂಘಟನೆ ಜೈಷ್ -ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಅವರ ಸಂಬಂಧಿ ಖಾರಿ ಎಜಾಜ್ ಅಬಿದ್‌ನನ್ನು ಹತ್ಯೆ ಮಾಡಿದ್ದಾರೆ. ಇದರೊಂದಿಗೆ ಪಾಕ್‌ನಲ್ಲಿ ಅನಾಮಿಕರ ಗುಂಡಿಗೆ ಬಲಿಯಾದ ಭಾರತಕ್ಕೆ ಬೇಕಾದ ಉಗ್ರರ ಸಂಖ್ಯೆ 30 ರ ಸನಿಹಕ್ಕೆ ತಲುಪಿದೆ.
ಖೈಬರ್ ಪುಂಖ್ಯಾ ಪ್ರಾಂತ್ಯದ ಪೇಶಾವರದ ಪಿಸ್ಟಾರಾ ಪ್ರದೇಶದ ಮಸೀದಿಯಿಂದ ‘ಹೊರಬರುತ್ತಿದ್ದಾಗ ದಾಳಿಕೋರರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ಖಾರಿ ಎಜಾಜ್ ಅವರ ಆಪ್ತ ಖಾರಿ ಶಾಹಿದ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.

