ಮುಂಬೈ : 26/11 ಮುಂಬೈ ದಾಳಿಯ ಪ್ರಮುಖ ಸಂಚುಕೋರ ತಹವರ್ ಹುಸೇನ್ ರಾಣಾ, ದಾಳಿಯ ಸಮಯದಲ್ಲಿ ನಾನು ಮುಂಬೈನಲ್ಲಿದ್ದ ಮತ್ತು ಪಾಕಿಸ್ತಾನಿ ಸೇನೆಯ ವಿಶ್ವಾಸಾರ್ಹ ವಿಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ.
ಪ್ರಸ್ತುತ ದಿಲ್ಲಿಯ ತಿಹಾರ್ ಜೈಲಿನಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಶದಲ್ಲಿರುವ ರಾಣಾ, ನಾನು ಮತ್ತು ನನ್ನ ಸಹಾಯಕ ಡೇವಿಡ್ ಕೋಲ್ಡನ್ ಹೆಡ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ದಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯಿಂದ ಅನೇಕ ತರಬೇತಿಗಳನ್ನು ಪಡೆದಿದ್ದಾಗಿ ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾನೆ. ఎలా ఇటి ಒಂದು ಸೈದ್ಧಾಂತಿಕ ಗುಂಪಿನ ಬದಲಿಗೆ ಬೇಹುಗಾರಿಕೆ ಜಾಲದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ರಾಣಾ ಬಹಿರಂಗಪಡಿಸಿದ್ದಾನೆ. ಮುಂಬೈನಲ್ಲಿ ನನ್ನ ಸಂಸ್ಥೆಗೆ ವಲಸೆ ಕೇಂದ್ರ ತೆರೆಯುವುದು ಯೋಜನೆಯಾಗಿತ್ತು ಮತ್ತು ಅಲ್ಲಿನ ಆರ್ಥಿಕ ವಹಿವಾಟುಗಳನ್ನು ವ್ಯಾಪಾರ ವೆಚ್ಚಗಳಾಗಿ ದಾಖಲಿಸಲಾಗಿದೆ ಎಂದು ರಾಣಾ ಹೇಳಿದ್ದಾನೆ.
26/11 ದಾಳಿಗೂ ಮೊದಲು, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌ನಂತಹ ಸ್ಥಳಗಳನ್ನು ರಾಣಾ ವೈಯಕ್ತಿಕವಾಗಿ ಪರಿಶೀಲಿಸಿದ್ದ. ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಸಹಯೋಗ ದೊಂದಿಗೆ ದಾಳಿ ನಡೆಸಲಾಗಿತ್ತು ಎಂದು ರಾಣಾ ಹೇಳಿದ್ದಾನೆ. ಪಾಕಿಸ್ತಾನದ ಮಾಜಿ ಸೇನಾ ಅಧಿಕಾರಿಯಾಗಿದ್ದ ರಾಣಾ, ಕೊಲ್ಲಿ ಯುದ್ಧದ ಸಮಯದಲ್ಲಿ ನನ್ನನ್ನು ಸೌದಿ ಅರೇಬಿಯಾಕ್ಕೆ ರಹಸ್ಯ ಕಾರ್ಯಾಚರಣೆಗೆ ಕಳುಹಿಸಲಾಗಿತ್ತು ಎಂದು ಹೇಳಿಕೊಂಡಿದ್ದಾನೆ.
ಮುಂಬೈ ಪೊಲೀಸರು ರಾಣಾನನ್ನು ಔಪಚಾರಿಕವಾಗಿ ಬಂಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಪಾಕ್ ಮೂಲದ ಕೆನಡಾ ಪ್ರಜೆ ರಾಣಾನ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತಿರಸ್ಕರಿಸಿದ ನಂತರ ಈ ವರ್ಷದ ಆರಂಭದಲ್ಲಿ ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಆತ ಪಿತೂರಿ, ಕೊಲೆ, ಭಯೋತ್ಪಾದನೆ, ನಕಲು ಸೇರಿ ಹಲವು ಆರೋಪಗಳನ್ನು ಎದುರಿಸುತ್ತಿದ್ದಾನೆ. ಆತನ ನ್ಯಾಯಾಂಗ ಬಂಧನವನ್ನು ಇತ್ತೀಚೆಗೆ ಜು.9ರವರೆಗೆ ವಿಸ್ತರಿಸಲಾಗಿತ್ತು

