ಹೊಸದಿಲ್ಲಿ : ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ (ಎಲ್ಸಿಎ) ತೇಜಸ್ನ ಯಶಸ್ವಿ ಹಾರಾಟ ನಡೆಸುವ ಮೂಲಕ ಸ್ಟಾಡ್ರನ್ ಲೀಡರ್ ಮೋಹನಾ ಸಿಂಗ್ ಅವರು ಫೈಟರ್ ಜೆಟ್ ನ ಸ್ಟ್ಯಾಡ್ರನ್ ಅನ್ನು ನಿರ್ವಹಿಸುವ ವಾಯುಪಡೆಯ ಎಲೈಟ್ 18 ಫೈಯಿಂಗ್ ಬುಲೆಟ್ಸ್ ಸ್ಟ್ರಾಡ್ರನ್ ಗೆ ಸೇರ್ಪಡೆಗೊಂಡ ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೋಹನಾ ಸಿಂಗ್ ಅವರ ಈ ಐತಿಹಾಸಿದ ಸಾಧನೆ ಮೂಲಕ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೆ ಭಾರತೀಯ ವಾಯುಪಡೆಯ ಬದ್ಧತೆ ಅನಾವರಣಗೊಂಡಿದೆ. ಇತ್ತೀಚೆಗೆ ಜೋಧಪುರದಲ್ಲಿ ನಡೆದ ತರಂಗ್ ಶಕ್ತಿ ವಾಯು ಸಮರಾಭ್ಯಾಸದಲ್ಲಿ ಭಾಗವಹಿಸಿದ್ದ ಅವರು, ಮೂರು ಪಡೆಗಳ ಮೂವರು ಉಪಮುಖ್ಯಸ್ಥರ ಐತಿಹಾಸಿಕ ಹಾರಾಟದ ಭಾಗವಾಗಿದ್ದರು.