178
ಕನ್ಯಾಕುಮಾರಿ : ವಿವೇಕಾನಂದ ಶಿಲಾ ಸ್ಮಾರಕದಲ್ಲಿ 45 ಗಂಟೆಗಳ ಧ್ಯಾನವನ್ನು ಶನಿವಾರ ಅಪರಾಹ್ನ ಅತ್ಯಂತ ಶಾಸ್ತ್ರಬದ್ದವಾಗಿ ಮುಕ್ತಾಯಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, ನಂತರ ತಮಿಳು ಸಂತ, ಕವಿ ತಿರುವಳ್ಳುವರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು
ಶ್ವೇತ ವಸ್ತ್ರಧಾರಿ ಪ್ರಧಾನಿ ನಮೋ ಧ್ಯಾನದ ಮುಕ್ತಾಯ ಘಟ್ಟದಲ್ಲಿ ಶಿಲಾಸ್ಮಾರಕಕ್ಕೆ ಸಮೀಪದ ಪ್ರತಿಮಾ ಸಂಕೀರ್ಣಕ್ಕೆ ದೋಣಿ ಮೂಲಕ ತಲುಪಿದರು ಮತ್ತು ಸಂತ ತಿರುವಲ್ಲುವಾರ್‌ರಿಗೆ ಭಾಷ್ಪಾಂಜಲಿ ಸಮರ್ಪಣೆ ಪ್ರತೀಕವಾಗಿ ಬೃಹತ್ ಪುಷ್ಪಹಾರವನ್ನು ಅವರ ಪ್ರತಿಮೆಗೆ ಸಮರ್ಪಿಸಿದರು. ನಂತರ ದೋಣಿ ಮೂಲಕ ತೀರ ತಲುಪಿದರು. ಶಿಲಾ ಸ್ಮಾರಕದಲ್ಲಿ ಖಾವಿಧಾರಿಯಾಗಿ ಧ್ಯಾನ ಮಾಡಿದ್ದ ಪ್ರಧಾನಿ, ಧ್ಯಾನದ ಅಂಗವಾಗಿ ಸೂರ್ಯೋದಯ ವೇಳೆ ಸೂರ್ಯದೇವನಿಗೆ ಆರ್ಥ್ಯ ಸಮರ್ಪಿಸಿದ್ದರು

