91
ತಿರುಪತಿ : ಈ ಹಿಂದೆಯೇ ಸುತ್ತೋಲೆ ಹೊರಡಿಸಿದಂತೆ ತಿರುಮಲ ತಿರುಪತಿ ದೇವಸ್ತ್ರಂ ಮಂಡಳಿಯು (ಟಿಟಿಡಿಯ) ನಾಲ್ವರು ಹಿಂದುಯೇತರ ಸಿಬ್ಬಂದಿಯನ್ನು ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಉದ್ಯೋಗದಿಂದ ಅಮಾನತುಗೊಳಿಸಿದೆ. ಮಂಡಳಿಯು ಬಿಐಆರ್ ಆರ್‌ಡಿ ಆಸ್ಪತ್ರೆಯ ಉಪ ಕಾರ್ಯನಿರ್ವಾಹಕ ಎಂಜಿನಿಯರ್ ಬಿ. ಎಲಿಜರ್, ಸ್ಟಾಫ್ ನರ್ಸ್ ಎಸ್. ರೋಸಿ, ಆಸ್ಪತ್ರೆಯ ಗ್ರೇಡ್-1 ಫಾರ್ಮಸಿಸ್ಟ್ ಎಂ. ಪ್ರೇಮಾವತಿ ಮತ್ತು ಎಸ್.ವಿ. ಆಯುರ್ವೇದ ಔಷಧಾಲಯದ ಜಿ. ಅಸುಂತಾ ಅವರನ್ನು ಅಮಾನತುಗೊಳಿಸಿದೆ.
ಈ ನೌಕರರು ಸಂಸ್ಥೆಯ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಹಿಂದು ಧಾರ್ಮಿಕ ಸಂಸ್ಥೆಯಲ್ಲಿ ಕೆಲಸದ ಸಮಯದಲ್ಲಿ ತಮ್ಮ ವೈಯಕ್ತಿಕ ಮತದ ಆಚರಣೆ ಮಾಡುವ ಮೂಲಕ ಧಾರ್ಮಿಕ ಸಂಸ್ಥೆಯ ನಿಯಮ ಉಲ್ಲಂಘಿಸಿದ್ದಾರೆ ಎಂದು ಟಿಟಿಡಿ ಆರೋಪಿಸಿದೆ. ಟಿಟಿಡಿ ವಿಜಿಲೆನ್ಸ್ ಇಲಾಖೆ ಸಲ್ಲಿಸಿದ ವರದಿ ಮತ್ತು ಇತರ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ ನಿಯಮಗಳ ಪ್ರಕಾರ ಅವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಯಿತು.

