Home » 10 ಶಂಕಿತ ಉಗ್ರರ ಸೆರೆ
 

10 ಶಂಕಿತ ಉಗ್ರರ ಸೆರೆ

by Kundapur Xpress
Spread the love

ಶ್ರೀನಗರ : ಜಮ್ಮು-ಕಾಶ್ಮೀರದ ಗುಪ್ತಚರ ನಿಗ್ರಹ ಘಟಕ 10 ವಿವಿಧ ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ 10 ಶಂಕಿತ ಉಗ್ರರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನಿ ಹ್ಯಾಂಡ್ಲರ್‌ಗಳ ಸೂಚನೆ ಮೇರೆಗೆ ಎನ್‌ಕ್ರಿಪ್ಟೆಡ್ (ಭೇದಿಸಲಾಗದ) ಮೆಸೇಜಿಂಗ್ ಆ್ಯಪ್‌ಗಳ ಮುಖೇನ ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ)ನ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ 10 ಶಂಕಿತ ಉಗ್ರರನ್ನು ಜಮ್ಮು-ಕಾಶ್ಮೀರ ಪೊಲೀಸ್ ನ ಗುಪ್ತಚರ ನಿಗ್ರಹ ಘಟಕವಾದ ಗುಪ್ತಚರ ನಿಗ್ರಹ ಕಾಶ್ಮೀರ್ (ಸಿಐಕೆ) ಬಂಧಿಸಿದೆ.

ಬಡ್ಯಾಮ್, ಪುಲ್ವಾಮ, ಗಾಂಧಾರ್‌ಬಲ್ ಮತ್ತು ಶ್ರೀನಗರ ಜಿಲ್ಲೆಗಳ 10 ವಿವಿಧ ಸ್ಥಳಗಳಲ್ಲಿ ಸಿಐಕೆ ನಡೆಸಿದ ಶೋಧ ಕಾರ್ಯಾಚರಣೆ ವೇಳೆ 10 ಭಯೋತ್ಪಾದಕ ಬೆಂಬಲಿಗರನ್ನು ಸೆರೆಹಿಡಿಯಲಾಗಿದೆ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯ (ಯುಎಪಿಎ) ಹಲವು ಸ್ಪೆಕ್ಷನ್‌ಗಳು ಮತ್ತು ಐಪಿಸಿ ಸೆಕ್ಷನ್ 120-ಬಿ ಅಡಿಯಲ್ಲಿ 2 ವರ್ಷಗಳ ಹಿಂದೆ ದಾಖಲಿಸಿದ್ದ ಪ್ರಕರಣ ಸಂಬಂಧ ಸಿಐಕೆ ಶೋಧ ಕಾರ್ಯಾಚರಣೆ ನಡೆಸಿದೆ.

 

Related Articles

error: Content is protected !!