91
ನವದೆಹಲಿ : ಉದ್ಯಮಿ ಅನಂತ್ ಅಂಬಾನಿ ಮುಖ್ಯಸ್ಥರಾಗಿರುವ ಗುಜರಾತ್‌ನ ಜಾಮ್‌ನಗರದ ಪ್ರಾಣಿ ಸಂರಕ್ಷಣಾ ಕೇಂದ್ರವಾದ ವನ್‌ತಾರಾಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿ ನೀಡಿದರು. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು,
‘ವನ್ಯಜೀವಿ ಸಂರಕ್ಷಣೆ, ರಕ್ಷಣೆ ಮತ್ತು ಪುನರ್ವಸತಿ ಉಪಕ್ರ ಮವಾದ ವನ್‌ತಾರಾ ಉದ್ಘಾಟಿಸಲಾಯಿತು. ಇದು ಪ್ರಾಣಿಗಳಿಗೆ ಸುರಕ್ಷಿತ ತಾಣ ಒದಗಿಸುತ್ತದೆ. ಪರಿಸರ ಸುಸ್ಥಿರತೆ ಮತ್ತು ವನ್ಯಜೀವಿ ಕಲ್ಯಾಣ ಉತ್ತೇಜಿಸುತ್ತದೆ ಈ ಪ್ರಯತ್ನಕ್ಕಾಗಿ ಅನಂತ್ ಅಂಬಾನಿ ಮತ್ತು ಅವರ ತಂಡವನ್ನು ಶ್ಲಾಘಿಸುತ್ತೇನೆ’ ಎಂದಿದ್ದಾರೆ
ಭೇಟಿ ವೇಳೆ ಪ್ರಧಾನಿ ಒಕಾಪಿಯನ್ನು ತಟ್ಟಿದರು. ಚಿಂಪಾಂಜಿ ವೀಕ್ಷಿಸಿದರು. ನೀರುನಾಯಿಯನ್ನು, ಮೊಸಳೆಗಳನ್ನು ನೋಡಿದರು. ಜೀಬ್ರಾಗಳ ನಡುವೆ ನಡೆದಾಡಿದರು. ಜಿರಾಫೆ ಮತ್ತು ಖಡ್ಗಮೃಗದ ಮರಿಗೆ ಆಹಾರವನ್ನು ನೀಡಿದರು’ ಎಂದು ವನ್‌ತಾರಾ ಹೇಳಿಕೆ ನೀಡಿದೆ. ವನ್‌ತಾರಾ ಭೇಟಿ ವೇಳೆ ಪ್ರಧಾನಿ ವನ್ಯಜೀವಿ ಆಸ್ಪತ್ರೆಗೆ ಭೇಟಿ ನೀಡಿದರು.

