Home » ವಿಶ್ವಸಂಸ್ಥೆಯಲ್ಲೂ ಮೋದಿ ಶಾಂತಿಮಂತ್ರ
 

ವಿಶ್ವಸಂಸ್ಥೆಯಲ್ಲೂ ಮೋದಿ ಶಾಂತಿಮಂತ್ರ

by Kundapur Xpress
Spread the love

ನ್ಯೂಯಾರ್ಕ್‌ : ಮಾನವೀಯತೆಯ ಯಶಸ್ಸು ನಮ್ಮ ಸಾಮೂಹಿಕ ಶಕ್ತಿಯಲ್ಲಿದೆಯೇ ಹೊರತು ಯುದ್ಧ ಭೂಮಿಯಲ್ಲಿ ಅಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಈ ಮೂಲಕ ಯುದ್ಧದಲ್ಲಿ ಮುಳುಗಿರುವ ಉಕ್ರೇನ್-ರಷ್ಯಾ ಹಾಗೂ ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಪರೋಕ್ಷವಾಗಿ ಶಾಂತಿ ಸಂದೇಶ ರವಾನಿಸಿದ್ದಾರೆ. ಅಲ್ಲದೆ, ಉಗ್ರವಾದದ ವಿರುದ್ಧವೂ ಮತ್ತೆ ಚಾಟಿ ಬೀಸಿದ್ದಾರೆ.

ಇದೇ ವೇಳೆ, ‘ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗಾಗಿ, ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳು ಮುಖ್ಯವಾಗಿವೆ. ಸುಧಾರಣೆಯು ಪ್ರಸ್ತು ತ ಕಾಲದ ಅತ್ಯಂತ ಅವಶ್ಯವಾದ ಕ್ರಮವಾಗಿದೆ’ ಎಂದೂ ಮೋದಿ ಹೇಳಿದ್ದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಂಥ ಮಹತ್ವದ ಸಂಸ್ಥೆಗಳಲ್ಲಿ ಭಾರತಕ್ಕೆ ಕಾಯಂ ಸ್ಥಾನ ಸಿಗಬೇಕು ಎಂಬ ಬೇಡಿಕೆ ಯನ್ನು ಪರೋಕ್ಷವಾಗಿ ಒತ್ತಿ ಹೇಳಿದ್ದಾರೆ.

ತಮ್ಮ ಅಮೆರಿಕ ಭೇಟಿಯ ಅಂತಿಮ ದಿನ ದಂದು ನ್ಯೂಯಾರ್ಕ್‌ ನಗರದಲ್ಲಿ ವಿಶ್ವಸಂಸ್ಥೆ ಯಲ್ಲಿ ‘ಭವಿಷ್ಯದ ಶೃಂಗಸಭೆ’ ಉದ್ದೇಶಿಸಿ ಮಾತನಾಡಿದ ಮೋದಿ, ‘ಸುಸ್ಥಿರ ಅಭಿವೃದ್ಧಿಗೆ ಹಾಗೂ ಮಾನವ-ಕೇಂದ್ರಿತ ವಿಧಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು

   

Related Articles

error: Content is protected !!