ಹೈದರಾಬಾದ್ : ರಾಜ್ಯ ವಕ್ಸ್ ಮಂಡಳಿಗೆ ಸಂಬಂಧಿಸಿ ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ಆಂಧ್ರಪ್ರದೇಶದ ಎನ್.ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ ವಜಾಗೊಳಿಸಿದ್ದು, ಶೀಘ್ರವೇ ಹೊಸ ಮಂಡಳಿಯನ್ನು ರಚಿಸಲಿದೆ ವಕ್ಸ್ ತಿದ್ದುಪಡಿ ಮಸೂದೆ 2024ರ ವಿರುದ್ದ ಮುಸ್ಲಿಂ ಸಂಘಟನೆಗಳು, ವಿಪಕ್ಷಗಳು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆ ಟಿಡಿಪಿ ಸರ್ಕಾರ ಪ್ರಸ್ತುತ ನಿರ್ಧಾರ ಕೈಗೊಂಡಿದೆ.
ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ರಚಿಸಿದ್ದ ವಕ್ಸ್ ಮಂಡಳಿ 2023 ರಿಂದ ನಿಷ್ಕ್ರಿಯವಾಗಿದೆ. ಅದರಲ್ಲಿ ಸುನ್ನಿ ಮತ್ತು ಶಿಯಾ ಸಮುದಾಯಕ್ಕೆ ಸೇರಿದ್ದವರಾಗಲಿ, ಮಾಜಿ ಸಂಸದರು ಕೂಡ ಇರಲಿಲ್ಲ ಪರಿಣಾಮ ವಕ್ಸ್ ಮಂಡಳಿ ಪೂರ್ಣ ನಿಷ್ಕ್ರಿಯಗೊಂಡಿತ್ತು ಎಂದು ಟಿಡಿಪಿ ಸರ್ಕಾರ ಆದೇಶದಲ್ಲಿ ಹೇಳಿದೆ. ವಕೀಲರ ಮಂಡಳಿ ನಿಯಮಗಳಿಗೆ ವಿರುದ್ಧವಾಗಿ ಕಿರಿಯ ವಕೀಲರನ್ನು ವಕ್ಸ್ ಮಂಡಳಿಗೆ ನಿಯುಕ್ತಿಗೊಳಿಸಲಾಗಿತ್ತು. ಇದರಿಂದ ಪ್ರಕರಣ ದಾಖಲಿಸಿದ ಹಿರಿಯ ವಕೀಲರುಗಳ ಹಿತಾ ಸಕ್ತಿಗೆ ತೊಂದರೆಯಾಗುತ್ತಿತ್ತು ಮತ್ತು ಸಂಘರ್ಷಕ್ಕೂ ಕಾರಣವಾಗುತ್ತಿತ್ತು ಎಂದು ಆದೇಶ ಹೇಳಿದೆ.