Home » ಬಂಕ್ ಸಿಬ್ಬಂದಿಗೆ ರಿವಾಲ್ವರ್ ತೋರಿಸಿ ಮಹಿಳೆ ಬೆದರಿಕೆ
 

ಬಂಕ್ ಸಿಬ್ಬಂದಿಗೆ ರಿವಾಲ್ವರ್ ತೋರಿಸಿ ಮಹಿಳೆ ಬೆದರಿಕೆ

by Kundapur Xpress
Spread the love

ಲಖನೌ : ಪೆಟ್ರೋಲ್-ಡೀಸೆಲ್‌ ಬಂಕ್‌ನಲ್ಲಿ ಸಿಬ್ಬಂದಿ ಜತೆಗಿನ ವಾಗ್ವಾದ ಸಂಬಂಧದಲ್ಲಿ ಮಹಿಳೆಯೊಬ್ಬಳು ಸಿಬ್ಬಂದಿಗೆ ರಿವಾಲ್ವರ್ ತೋರಿಸಿ ಬೆದರಿಕೆ ಹಾಕಿದ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ನಡೆದಿದೆ.

ಯುವತಿ ಮತ್ತು ಆಕೆಯ ತಂದೆ ಬಂಕ್‌ಗೆ ಪೆಟ್ರೋಲ್ ತುಂಬಿಸಲು ಬಂದಿದ್ದರು. ಈ ವೇಳೆ ಸಿಬ್ಬಂದಿಯ ಜತೆ ಯಾವುದೋ ಕಾರಣಕ್ಕೆ ವಾಗ್ವಾದ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಬಂಕ್‌ನಲ್ಲಿದ್ದ ಭದ್ರತಾ ಸಿಬ್ಬಂದಿಯ ರಿವಾಲ್ವ‌ರ್ ಹಿದಿದ್ದಾಳೆ. ಅದನ್ನು ಬಂಕ್ ಸಿಬ್ಬಂದಿಗೇ ತೋರಿಸಿ ಬೆದರಿಕೆ ಹಾಕಿದ್ದಾಳೆ

ಇನ್ನು ಘಟನೆ ಸಂಬಂಧಿಸಿದಂತೆ ಪೊಲೀಸರು ಮಹಿಳೆ ಮತ್ತು ಆಕೆಯ ತಂದೆಯನ್ನು ಬಂಧಿಸಿದ್ದು, ರಿವಾಲ್ವರ್ ವಶ ಪಡಿಸಿಕೊಂಡಿದ್ದಾರೆ. ಮಹಿಳೆ ರಿವಾಲ್ವರ್ ಹಿಡಿದು ಬೆದರಿಕೆ ಹಾಕುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

 

Related Articles

error: Content is protected !!