Home » ವೈಎಸ್‌ಆರ್‌ಸಿಪಿ ಎಂಪಿ ಮಿಧುನ್ ಬಂಧನ
 

ವೈಎಸ್‌ಆರ್‌ಸಿಪಿ ಎಂಪಿ ಮಿಧುನ್ ಬಂಧನ

by Kundapur Xpress
Spread the love

ಹೊಸದಿಲ್ಲಿ : ಆಂಧ್ರ ಅಬಕಾರಿ ಹಗರಣದಲ್ಲಿ ವೈಎಸ್ ಆರ್‌ಸಿಪಿ ಸಂಸದ ಪಿವಿ ಮಿಧುನ್ ರೆಡ್ಡಿಯನ್ನು ಬಂಧಿಸಿದ್ದು, ಅಕ್ರಮ ಪಾವತಿ ಸ್ವೀಕರಿಸಿದ ಆರೋಪದಲ್ಲಿ ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಪಾತ್ರವನ್ನು ಪೊಲೀಸರು ತಮ್ಮ ದಾಖಲೆಯಲ್ಲಿ ವಿವರಿಸಿದ್ದಾರೆ. ಆದರೆ ಆರೋಪಪಟ್ಟಿಯಲ್ಲಿ ಅವರ ಹೆಸರನ್ನು ಪೊಲೀಸರು ಉಲ್ಲೇಖಿಸಿಲ್ಲ. ಆದರೂ ಜಗನ್‌ಗೆ 3,500 ಕೋಟಿ ರೂ. ಮೌಲ್ಯದ ಅಬಕಾರಿ ಹಗರಣದಲ್ಲಿ ತನಿಖೆ ಎದುರಿಸುವ ಭೀತಿ ಎದುರಾಗಿದೆ.

ವೈಎಸ್‌ಆರ್‌ಸಿಪಿ ಸಂಸದ ಮಿಧುನ್ ರೆಡ್ಡಿ ಬಂಧಿಸಿದ ಪೊಲೀಸರು ಶನಿವಾರ ಸ್ಥಳೀಯ ನ್ಯಾಯಾಲಯಕ್ಕೆ 305 ಪುಟಗಳ ದಾಖಲೆ ಸಲ್ಲಿಸಿದ್ದಾರೆ. 2019-2024ರಲ್ಲಿ ವೈಎಸ್‌ಆರ್‌ಸಿಪಿ ಆಡಳಿತಾವಧಿಯಲ್ಲಿ ಅಂದಿನ ಸಿಎಂ ಜಗನ್ ಪ್ರತಿ ತಿಂಗಳು 50ರಿಂದ 60 ಕೋಟಿ ರೂ. ಅಕ್ರಮ ಪಾವತಿ ಸ್ವೀಕರಿಸುತ್ತಿದ್ದರು ಎಂಬ ಆರೋಪ ಅವರ ಮೇಲಿದೆ. ಆದರೂ ಆರೋಪಪಟ್ಟಿಯಲ್ಲಿ ಜಗನ್ ಹೆಸರು ಸೇರ್ಪಡೆಯಾಗಿಲ್ಲ.

 

Related Articles

error: Content is protected !!