Home » ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ
 

ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ

by Kundapur Xpress
Spread the love
ಪುತ್ತೂರು ಎಂದ ಕೂಡಲೇ ನಮಗೆ ನೆನಪಾಗುವುದು ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ. ಪುತ್ತೂರಿನ ಮಹಾಲಿಂಗೇಶ್ವರ ದೇವರನ್ನು ಪುತ್ತೂರ್ದ ಮುತ್ತು ಹಾಗೂ ಹತ್ತೂರ ಒಡೆಯ ಎನ್ನಲಾಗುತ್ತದೆ. ಪುತ್ತೂರು ಮಹಾಲಿಂಗೇಶ್ವರ ದೇವರ ಪವಾಡ ಅಪಾರ . ದೇವಸ್ಥಾನದ ಮುಂಭಾಗದಲ್ಲಿ ಸ್ಮಶಾನವಿರುವ ಶಿವ ದೇವಸ್ಥಾನ ಕಾಶಿಯನ್ನು ಬಿಟ್ಟರೆ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ ಮಾತ್ರ . ಪುತ್ತೂರು ಜಾತ್ರೆ ಬಂತೆಂದರೆ ಅನೇಕ ಭಕ್ತರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೇರುತ್ತಾರೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನವು ಸುಮಾರು 11-12 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾದ ಪುರಾತನ ದೇವಾಲಯವಾಗಿದೆ. ಈ ದೇವಾಲಯದ ಮುಖ್ಯ ದೇವರು ಶಿವ. ಈ ದೇವಾಲಯದ ಪಶ್ಚಿಮ ಭಾಗದಲ್ಲಿ ನೀರಿನ ಕಡೆಗೆ ಹೋಗುವ ಕಲ್ಲಿನ ಮೆಟ್ಟಿಲುಗಳಿರುವ ವಿಶಿಷ್ಟವಾದ ಕೊಳವಿದೆ. ಹಿಂದಿನ ಕಾಲದಲ್ಲಿ ಕೊಳದಲ್ಲಿ ಮುತ್ತುಗಳು ಬೆಳೆಯುತ್ತಿದ್ದವು ಎಂದು ಹೇಳಲಾಗುತ್ತದೆ. ಸ್ಥಳೀಯ ಆಡುಭಾಷೆಯಲ್ಲಿ “ಮುತ್ತು” ಎಂದರೆ ಮುತ್ತುಗಳು, ಇದು ನಂತರ ಪುತ್ತೂರು ಎಂದು ಕರೆಯಲ್ಪಡುವ ಈ ಸ್ಥಳಕ್ಕೆ ಮುತ್ತೂರು ಎಂಬ ಹೆಸರನ್ನು ತಂದಿತು.ಪುತ್ತೂರು ಸೀಮೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರನ ದೇವಸ್ಥಾನ ಸುಮಾರು 800ವರ್ಷಗಳ ಇತಿಹಾಸವಿರುವ ಪುರಾತನ ದೇವಾಲಯ. ಈ ದೇವಾಲಯದ ಕಲಾತ್ಮಕ ಕೆತ್ತನೆಗಳನ್ನು ವರ್ಣಿಸಲು ಪದಗಳಿಗೆ ನಿಲುಕದ್ದು. ಈ ದೇವಸ್ಥಾನದ ಆಚರಣೆಗಳು, ಸಂಪ್ರದಾಯಗಳು ಕೂಡ ವಿಶಿಷ್ಟ . ಪುತ್ತೂರಿನ ಜನರ ದಿನಚರಿ ಮಹಾಲಿಂಗೇಶ್ವರ ದೇವರ ನಾಮ ಸ್ಮರಣೆಯೊಂದಿಗೆ ಶುರುವಾಗುತ್ತದೆ.
ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯವು ನಗರದ ಮಧ್ಯ ಭಾಗದಲ್ಲಿದೆ.ಹತ್ತೂರು ಬಿಟ್ಟರೂ ಪುತ್ತೂರು ಬಿಡೆ ಎಂಬ ಮಾತು ಪುತ್ತೂರಿಗೆ ಇರುವ ವಿಶೇಷತೆಯನ್ನು ತೋರಿಸುತ್ತದೆ. ಈ ವಿಶೇಷತೆಗೆ ಕಾರಣ ಇಲ್ಲಿನ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ. ಈ ಕ್ಷೇತ್ರಕ್ಕೆ ತನ್ನದೇ ಆದ ಹಲವಾರು ವೈಶಿಷ್ಯ್ಟಗಳಿವೆ.ದೇವಾಲಯ ಹಿಂಭಾಗದಲ್ಲಿರುವ ಸದಾ ಹಸಿರಿನಿಂದ ಕಂಗೊಳಿಸುವ ಕೆರೆ. ದೇವಾಲಯದ ಪಶ್ಚಿಮಕ್ಕೆ ಇರುವ ಕೆರೆಯಲ್ಲಿ ಅದರ ಆಳ ಎಷ್ಟೇ ಆದರೂ ನೀರು ಸಿಗದೇ ಇದ್ದ ಸಮಯದಲ್ಲಿ, ವರುಣ ದೇವರಿಗೆ ಪೂಜೆ ಸಲ್ಲಿಸಿ ಕೆರೆಯೊಳಗೆ ಬ್ರಾಹ್ಮಣರಿಗೆ ಅನ್ನಸಂತರ್ಪಣೆ ಮಾಡಬೇಕು ಎಂದು ತಿಳಿದುಬಂತು. ಅದರಂತೆ ಸಾವಿರಾರು ಜನರಿಗೆ ಕೆರೆಯ ತಳದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಯಿತು. ಬ್ರಾಹ್ಮಣರು ಊಟ ಮಾಡುತ್ತಿದ್ದಂತೆ ಕೆರೆಯಲ್ಲಿ ನೀರು ತುಂಬತೊಡಗಿತಂತೆ.‌ ಸೇರಿದ ಜನರು ಊಟದ ಎಲೆಯನ್ನು ಹಾಗೆಯೇ ಬಿಟ್ಟು ಎದ್ದು ಹೊರಗೆ ಓಡಿದರಂತೆ. ಅವರ ಎಲೆಯಲ್ಲಿದ್ದ ಅನ್ನದ ಅಗುಳುಗಳು ಮುತ್ತುಗಳಾಗಿ ಬೆಳೆದವು ಎಂದೂ, ಮುತ್ತುಗಳು ಬೆಳೆದ ಊರು ಮುತ್ತೂರು ಎಂದಾಗಿ, ಕ್ರಮೇಣ ಜನರ ಬಾಯಲ್ಲಿ ಪುತ್ತೂರು ಎಂದಾಯಿತೆಂದು ಇಲ್ಲಿನ ಜನರು ಹೇಳುತ್ತಾರೆ. ಪುರಾಣಗಳ ಪ್ರಕಾರ ಮಹಾತ್ಮರೊಬ್ಬರು ಕಾಶೀ ಕ್ಷೇತ್ರದಿಂದ ಶಿವಲಿಂಗವನ್ನು ತಮ್ಮ ಸಂಪುಟದಲ್ಲಿರಿಸಿಕೊಂಡು ದಕ್ಷಿಣ ಪಥದಲ್ಲಿ ಸಂಚರಿಸುತ್ತಾ ಪುತ್ತೂರಿಗೆ ಬಂದ ಸಂದರ್ಭದಲ್ಲಿ ಅರಿಯದೆ ಮರದ ನೆರಳಿನಲ್ಲಿರಿಸಿ ಪೂಜೆ ಮಾಡಿದರು. ಆಮೇಲೆ ಲಿಂಗವನ್ನು ಎತ್ತಲು ಪ್ರಯತ್ನಿಸಿದಾಗ ಸ್ವಯಂಭೂ ಆಯಿತು.
ಅರಸ ಬಂಗರಸನು ಲಿಂಗವನ್ನು ನೆಲದಿಂದ ಮೇಲೆತ್ತಲು ಪ್ರಯತ್ನಿಸಿದ. ಆನೆಯ ಸೊಂಡಿಲಿನಿಂದ ಎಳೆಸಿದಾಗ ದೈವೀಗುಣವುಳ್ಳ ಲಿಂಗವು ಮಹಾಲಿಂಗದ ರೂಪ ತಾಳಿದಾಗ ಗಜರಾಜನ ದೇಹ ಛಿದ್ರವಾಗಿ ಚದುರಿಹೋಯಿತು. ಬಳಿಕ ಬಂಗರಾಜನು ನಿತ್ಯ ಪೂಜೆಗೆ ವ್ಯವಸ್ಥೆ ಮಾಡಿದ ಎಂದು ಪುರಾಣಗಳಲ್ಲಿ ಹೇಳಲಾಗಿದೆ.ಪುತ್ತೂರು ಒಡೆಯನ ದೇವಾಲಯಕ್ಕೆ ತೌಳವ-ದ್ರಾವಿಡ ಶೈಲಿಯ ರಾಜಗೋಪುರ ಸಮರ್ಪಣೆಯಾಗಿದೆ. 19 ಅಡಿ ಸುತ್ತಳತೆ, 47 ಅಡಿ ಎತ್ತರದ ರಾಜಗೋಪುರವನ್ನು 120 ಮೂರ್ತಿಗಳಿಂದ ಅಲಂಕರಿಸಲಾಗಿದೆ. ತುತ್ತ ತುದಿಯಲ್ಲಿ ಪಂಚಕಲಶಗಳು ಶೋಭಾಯಮಾನವಾದರೆ ಇಕ್ಕೆಲಗಳಲ್ಲಿ ಶೋಭಾನೆ ಮಂಟಪವಿದೆ. ಪುತ್ತೂರು ಮಹಾಲಿಂಗೇಶ್ವರನ ಬ್ರಹ್ಮ ರಥವನ್ನು ನೋಡುವುದೇ ಚೆಂದ ಇದು 71ಅಡಿ ಉದ್ದ ಮತ್ತು 21 ಅಡಿ ಅಗಲವಿದೆ. ಪುತ್ತೂರು ಮಹಾಲಿಂಗೇಶ್ವರನ ಜಾತ್ರೆಯನ್ನು ನೋಡಲು ಎರಡು ಕಣ್ಣು ಸಾಲದು . ಸ್ವರ್ಗವೇ ಧರೆಗಿಳಿದು ಬಂದಂತೆ ಅನುಭವವಾಗುತ್ತದೆ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೆ. ಆದಿ ಮಾಯೆಯು ಜಗತ್ತನ್ನು ಸೃಷ್ಟಿಸಿದಾಗ ಸೃಷ್ಟಿ ಸ್ಥಿತಿ, ಲಯಗಳನ್ನು ಕಾಪಾಡಿಕೊಂಡು ಬರಲು ಬ್ರಹ್ಮ, ವಿಷ್ಣು ,ಮಹೇಶ್ವರರಿಗೆ ಆದೇಶಿಸುತ್ತಾಳೆ ಎಂಬುದನ್ನು ಪುರಾಣದಲ್ಲಿ ಹೇಳಲಾಗಿದೆ. ಕರಾವಳಿಯಲ್ಲಿ ಇರುವ ಶಿವ ದೇವಾಲಯಗಳಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯವು ಕೂಡ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದೆ. ಪುತ್ತೂರಿನ ಒಡೆಯ ಮಹಾಲಿಂಗೇಶ್ವರನ ಜಾತ್ರೆಯು ಏಪ್ರಿಲ್ 10 ರಿಂದ ಏಪ್ರಿಲ್ 20ರವರೆಗೆ ನಡೆಯಲಿದೆಪ್ರದೀಪ್‌ ಚಿನ್ಮಯಿ ಆಸ್ಪತ್ರೆ ಕುಂದಾಪುರ
   

Related Articles

error: Content is protected !!