Home » ಕೈಲಾಸ ಪರ್ವತ ಇದು ಶಿವನ ವಾಸ ಕ್ಷೇತ್ರ
 

ಕೈಲಾಸ ಪರ್ವತ ಇದು ಶಿವನ ವಾಸ ಕ್ಷೇತ್ರ

by Kundapur Xpress
Spread the love

ಪುರಾಣಗಳ ಪ್ರಕಾರ ಕೈಲಾಸ ಪರ್ವತವು ಶಿವನ ವಾಸ ಕ್ಷೇತ್ರವಾಗಿದೆ . ಶಿವನು ಕೈಲಾಸ ಪರ್ವತದಲ್ಲಿ ಯಾವಾಗಲೂ ಧ್ಯಾನ ಮಾಡುತ್ತಿರುತ್ತಾನೆ ಎಂದು ಪುರಾಣಗಳ ಪ್ರತೀತಿ. ಕೈಲಾಸ ಪರ್ವತ ಇರುವುದು ಹಿಮಾಲಯದ ತುತ್ತ ತುದಿಯ ತಪ್ಪಲಿನಲ್ಲಿ . ಇದುವರೆಗೂ ಕೈಲಾಸ ಪರ್ವತವನ್ನು ಏರಲು ಯಾರು ಸಫಲವಾಗಿಲ್ಲ ಎಂಬುದೇ ನಿಗೂಢ.ಕೈಲಾಸ ಪರ್ವತದಲ್ಲಿ ಅನೇಕ ಋಷಿಗಳು ಮತ್ತು ದೇವತೆಗಳು ವಾಸವಾಗಿರುತ್ತಾರೆ ಎಂದು ಇಲ್ಲಿಯ ಜನರ ನಂಬಿಕೆ . ಅದಕ್ಕಾಗಿ ಕೈಲಾಸ ಪರ್ವತವನ್ನು ಜನರು ಅತ್ಯಂತ ಶ್ರೇಷ್ಠ ಮತ್ತು ಪೂಜ್ಯ ಭಾವದಿಂದ ನೋಡುತ್ತಾರೆ. ಕೈಲಾಸಪರ್ವತವು ಟಿಬೆಟ್ ನ ಹಿಮಾಲಯ ಶ್ರೇಣಿಯ ಗ್ಯಾಂಗ್ಡೈಸ್ ಸರಣಿಯ ಒಂದು ಶಿಖರ. ಕೈಲಾಸ ಪರ್ವತವು ಅನೇಕ ನದಿಗಳ ಉಗಮ ಸ್ಥಾನ. ಕೈಲಾಸ ಪರ್ವತವು ಟಿಬೆಟ್ ನಲ್ಲಿ ಮಾನಸ ಸರೋವರ ಮತ್ತು ರಾಕ್ಷಸ ಸ್ಥಾನಗಳ ಮಧ್ಯದಲ್ಲಿದೆ.

ಕೈಲಾಸ ಪರ್ವತವು ಸಮುದ್ರದ ಮಟ್ಟದಿಂದ 21 1778 ಅಡಿಗಳಷ್ಟು ಎತ್ತರದಲ್ಲಿದೆ ಎಂದು ಅಂದಾಜು ಮಾಡಲಾಗಿದೆ. ಹಿಂದೂ ಮತ್ತು ಬೌದ್ಧ ಧರ್ಮದವರ ಪವಿತ್ರ ಸ್ಥಾನ ಕೈಲಾಸ ಪರ್ವತ . ಹಿಂದೂ ಧರ್ಮದ ಪ್ರಕಾರ ಕೈಲಾಸ ಪರ್ವತದಲ್ಲಿ ಶಿವ ಪಾರ್ವತಿ ಕೈಲಾಸದಲ್ಲಿ ಸದಾ ವಾಸವಾಗಿರುತ್ತಾರೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಧನಾಧಿಪತಿ ಕುಬೇರನ ವಾಸಸ್ಥಾನವು ಕೂಡ ಕೈಲಾಸ ಪರ್ವತವೇ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಕೈಲಾಸ ಪರ್ವತವನ್ನು ವಿಶ್ವದ ಪರಮ ಉನ್ನತ ಅಧ್ಯಾತ್ಮದ ಕೇಂದ್ರ ಎಂದು ಹೇಳಲಾಗುತ್ತದೆ.

ಪ್ರದೀಪ್‌ ಚಿನ್ಮಯಿ ಆಸ್ಪತ್ರೆ

   

Related Articles

error: Content is protected !!