Home » ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿ
 

ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿ

by Kundapur Xpress
Spread the love

ಕನಾ೯ಟಕ : ರಾಜ್ಯ ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಒಂದು ಅತ್ಯುನ್ನತ ಅಧ್ಯಾಯವನ್ನು ಬರೆದ ಧೀರ ಕನ್ನಡಿಗ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿದ್ದಾಗ ಗ್ಯಾಂಗ್ ವಾರ್ ಗ ಳು, ಭೂಗತ ದೊರೆಗಳು, ಕಳ್ಳಕಾಕರು, ದರೋಡೆಕೋರರು, ಲೂಟಿಕೋರರು, ಕಳ್ಳಸಾಗಣಿಕೆದಾರರು, ವೇಶ್ಯಾ ಜಾಲಗಳು ಮುಂತಾದ ಸಕಲ ಸಮಾಜ ಬಾಹಿರ ವ್ಯಕ್ತಿಗಳು ಬೆಂಗಳೂರು ನಗರ ಬಿಟ್ಟು ಪಲಾಯನ ಗೈದಿದ್ದರು ನಿಬೀ೯ತ ವಾತಾವರಣ ಸೖಷ್ಠಿಯಾಗಿದ್ದ ಬೆಂಗಳೂರಿನಲ್ಲಿ ಅಂದು ಮಧ್ಯ ರಾತ್ರಿಯ ವರೆಗೂ ಮಹಿಳೆಯೊಬ್ಬಳು ನಿಭೀ೯ತಿಯಿಂದ ಏಕಾಂಗಿಯಾಗಿ ಸಂಚರಿಸಲು ಸಾಧ್ಯವಾಯಿತು.

ಬೆಂಗಳೂರು ನಗರದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಶ್ರೀ ಭಾಸ್ಕರ ರಾವ್ ಮಾಡಿದ ಪರಿವತ೯ನೆ ಇಡೀ ದೇಶಕ್ಕೆ ಮಾದರಿಯಾಗಿದೆ. ತಮ್ಮ ಅಧೀನದಲ್ಲಿ ಸಮಥ೯ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ ಕೊಂಡು ಅವರಿಗೆ ಗುರುತರವಾದ ಹೊಣೆ ಹೊರಿಸಿ ಅವರಿಂದ ಸಮಥ೯ ಸೇವೆ ಮಾಡಿಸಿ ಬೆಂಗಳೂರು ನಗರದಲ್ಲಿ ನಿಬೀ೯ತಿಯ ವಾತಾವರಣ ನಿಮಾ೯ಣ ಮಾಡಿದ ಶ್ರೀ ಭಾಸ್ಕರ ರಾವ್ ನಗರದಾದ್ಯಂತ ಸವ೯ ಜನಾಧರನೀಯವಾಗಿ ಮೆಚ್ಚುಗೆ ಗಳಿಸಿದ್ದಾರೆ ದಿಟ್ಟೆದೆಯ ಪೊಲೀಸ್ ಅಧಿಕಾರಿಗಳನ್ನು ಸಂಯೋಜಿಸಿ ರಚಿಸಿದ ಡಕಾಯಿತಿ ನಿಗ್ರಹ ದಳ ದರೋಡೆಕೋರರಿಗೆ ಸಿಂಹ ಸ್ವಪ್ನವಾಗಿ ಪರಿಣಮಿಸಿದ್ದಲ್ಲದೆ ಕಳ್ಳತನ, ಪುಂಡಾಟಿಕೆ, ಮುಂತಾದ ಅಪರಾಧಗಳನ್ನು ಪತ್ತೆ ಹಚ್ಚಲು ವಿಶೇಷ ಪೋಲೀಸ್ ಪಡೆಯನ್ನು ರಸ್ತೆಗಿಳಿಸಿ ನೂರಾರು ಅಪರಾಧಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಶ್ರೀ ಭಾಸ್ಕರ ರಾವ್ ರವರ ಮಹಾತ್ಸಾದನೆಯನ್ನು ಕಂಡು ಉತ್ತೇಜನ ಗೊಂಡ ರಾಜ್ಯ ಸರಕಾರ ಅಂದು ರಾಜ್ಯದ ಇತರ ನಗರಗಳಲ್ಲಿ ಶ್ರೀ ಭಾಸ್ಕರ ರಾವ್ ರವರ ಅದ್ಭುತ ಕಾಯ೯ಚರಣೆಗಳ ಮಾದರಿಯನ್ನು ಆಳವಡಿಸಿದ್ದು ಶ್ರೀ ಭಾಸ್ಕರ ರಾವ್ ರವರ ದಕ್ಷ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ.

ಕನಾ೯ಟಕ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಸ್ಥಳಗಳಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ದುಷ್ಟರಿಗೂ ಭ್ರಷ್ಟರಿಗೂ ಸಿಂಹಸ್ವಪ್ನವಾಗಿ ಪರಿಣಮಿಸಿದ ಶ್ರೀ ಭಾಸ್ಕರ ರಾವ್ ರವರು ಮೂಲತಃ ಬೆಂಗಳೂರು ನಗರದ ನಿವಾಸಿಯಾಗಿದ್ದಾರೆ. ಶಿವಮೊಗ್ಗ ದಲ್ಲಿ ಪ್ರೊಬೆಶನರಿ ಎಎಸ್ಪಿ ಯಾಗಿಯೂ, ಕೊಡಗು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಾರವಾಡ ಮೊದಲಾದ ಕಡೆಗಳಲ್ಲಿ ಎಸ್ ಪಿ ಯಾಗಿಯೂ ಡಿಸಿಪಿ ಯಾಗಿಯೂ ಪ್ರಾಮಾಣಿಕ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು. ಕೆಎಸ್ಆರ್ ಪಿಯ ಎಡಿಜಿಪಿ ಯಾಗಿಯೂ, ಬೆಳ್ಗಾಂ ನಲ್ಲಿ ಆಂತರಿಕ ಭದ್ರತೆಯ ಡಿಐಜಿ ಯಾಗಿಯೂ ಅತ್ಯಂತ ದಕ್ಷ ಅಧಿಕಾರಿಯೆಂಬ ಹೆಗ್ಗಳಿಕೆಗೆ ಪಾತ್ರರಾದ ಶ್ರೀ ಭಾಸ್ಕರ ರಾವ್ ಇದೀಗ ರಾಜ್ಯ ರೈಲ್ವೇ ಪೊಲೀಸ್ ಇಲಾಖೆಯಲ್ಲಿ ಎಡಿಜಿಪಿ ಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದು ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ

   

Related Articles

error: Content is protected !!