ಕುಂದಾಪುರ : ಬಾಗಲಕೋಟೆ ಮೂಲದ ಬೀರಪ್ಪ ತುಡಬಿನ (37 ವರ್ಷ) ಅವರು ರಾತ್ರಿ ಮಲಗಿದ್ದಲ್ಲಿಯೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಅವರಿಗೆ ಆರೋಗ್ಯ ಸಮಸ್ಯೆಯಿದ್ದು ಈ ಬಗ್ಗೆ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು. ವಿಪರೀತ ಮದ್ಯಪಾನದ ಚಟವಿದ್ದು, ಯಾವುದೋ ಕಾಯಿಲೆ ಉಲ್ಬಣಗೊಂಡು ಸಾವನ್ನಪ್ಪಿರುವುದಾಗಿದೆ. ಪತ್ನಿ ಸಿದ್ದಮ್ಮಾ ಕುಲಗೇರಿ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.