Home » ಭಕ್ತ ಕನಕದಾಸರು
 

ಭಕ್ತ ಕನಕದಾಸರು

by Kundapur Xpress
Spread the love

ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ- ಈ ಗೀತೆ ಭಕ್ತ ಕನಕದಾಸ ಚಲನಚಿತ್ರದ ಅತ್ಯಂತ ಜನಪ್ರಿಯ ಗೀತೆ . ಭಕ್ತ ಕನಕದಾಸರು ಎಂದಾಗಲೇ ನಮಗೆ ಉಡುಪಿಯಲ್ಲಿ ನೆನಪಾಗುವುದು ಉಡುಪಿ ಕೃಷ್ಣಮಠದ ಕನಕನ ಕಿಂಡಿ. ಕನಕದಾಸರು ಒಬ್ಬ ಹರಿದಾಸರು, ಶ್ರೇಷ್ಠ ಸಂತರಾಗಿ ಜನಪ್ರಿಯರಾಗಿ ಇವರನ್ನು ದಾಸ ಶ್ರೇಷ್ಠ ಕನಕದಾಸರು ಎಂದು ಕರೆಯುತ್ತಾರೆ. ಕನಕದಾಸರು ಓರ್ವ ಕೀರ್ತನೆಕಾರರಾಗಿ, ಕವಿಯಾಗಿ, ಕರ್ನಾಟಕದ ಸಂಗೀತಕಾರರಾಗಿ, ಹರಿದಾಸ ಪಂಥದ ಪ್ರಚಾರಕರಾಗಿ ಹೆಸರುವಾಸಿಯಾಗಿದ್ದಾರೆ. ಕನಕದಾಸರ ಆರಾಧ್ಯ ದೈವ ಕಾಗಿನೆಲೆಯ ಆದಿ ಕೇಶವ. ಕನಕದಾಸರ ಜನನ ವಾಗಿದ್ದು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ. ಕನಕದಾಸರ ನಿಜವಾದ ಹೆಸರು ತಿಮ್ಮಪ್ಪ ನಾಯಕ ಎಂದಾಗಿತ್ತು. ಕನಕದಾಸರ ತಾಯಿಯ ಹೆಸರು ಬಚ್ಚಮ್ಮ , ತಂದೆಯ ಹೆಸರು ಬೀರಪ್ಪ . ಕನಕದಾಸರ ಮಡದಿಯ ಹೆಸರು ಮುಕುತಿ ಎಂದಾಗಿತ್ತು. ಬಂಕಾಪುರದ ಮುಖ್ಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಕನಕದಾಸರು ತುಂಬಾ ಪ್ರಖ್ಯಾತಿಯಾಗಿದ್ದರು. ಬಂಕಾಪುರ ವಿಜಯನಗರದ ಮುಖ್ಯ ಪಟ್ಟಣವಾಗಿತ್ತು. ಒಮ್ಮೆ ತಿಮ್ಮಪ್ಪ ನಾಯಕನಿಗೆ ಕೆರೆಯ ಜೀರ್ಣೋದ್ಧಾರ ಕಾರ್ಯವನ್ನು ವಹಿಸಿದ್ದಾಗ ಕೆರೆಯಲ್ಲಿ ಅಪಾರ ಪ್ರಮಾಣದ ಚಿನ್ನದ ನಿಧಿ ಸಿಕ್ಕಿತು . ಅದಕ್ಕಾಗಿಯೇ ಜನ ಅವರನ್ನು ಕನಕ ಎಂದು ಕರೆಯಲು ಪ್ರಾರಂಭಿಸಿದರು.

ಕನಕ ಎಂದರೆ ಚಿನ್ನ ಎಂದು ಅರ್ಥ. ಒಮ್ಮೆ ತಿಮ್ಮಪ್ಪ ನಾಯಕನಿಗೆ ಯುದ್ಧದಲ್ಲಿ ಭಾಗವಹಿಸುವ ಅನಿವಾರ್ಯತೆ ಬಂತು. ಯುದ್ಧದಲ್ಲಿ ತಿಮ್ಮಪ್ಪ ನಾಯಕನು ಅತಿಯಾಗಿ ಗಾಯಕೊಂಡನು. ಆದರೆ ಪವಾಡ ಸದೃಶ್ಯ ಎಂಬಂತೆ ತಿಮ್ಮಪ್ಪ ನಾಯಕ ಬದುಕಿ ಉಳಿದನು. ಇದು ತಿಮ್ಮಪ್ಪ ನಾಯಕನಿಗೆ ಕಾಗಿನೆಲೆಯ ಆದಿ ಕೇಶವನ ಆಶೀರ್ವಾದದಂತೆ
ಭಾಸವಾಯಿತು. ಅಂದಿನಿಂದ ತಿಮ್ಮಪ್ಪ ನಾಯಕನು ಹರಿದಾಸ ಪಂಥವನ್ನು ಸೇರಿಕೊಂಡನು. ಅಂದಿನಿಂದ ತಿಮ್ಮಪ್ಪ
ನಾಯಕನು ಕನಕದಾಸನಾಗಿ ಬದಲಾದನು. ವ್ಯಾಸರಾಯರನ್ನು ತನ್ನ ಗುರುವಾಗಿ ಸ್ವೀಕರಿಸಿಕೊಂಡು. ಕನಕದಾಸರು ವ್ಯಾಸರಾಯರ
ಅತಿ ಪ್ರಿಯವಾದ ಶಿಷ್ಯರಾಗಿದ್ದರು . ವ್ಯಾಸರಾಯರ ಆದೇಶದ ಮೇರೆಗೆ ಕನಕದಾಸರು ಉಡುಪಿ ದರ್ಶನಕ್ಕೆಂದು ತೆರಳಿದರು. ಅಲ್ಲಿಯ ಕೆಲವರು ಅವರನ್ನು ದೇವಸ್ಥಾನದ ಒಳಗಡೆ ಹೋಗಲು ಬಿಡದಿದ್ದಾಗ ಕನಕದಾಸರು ಶ್ರೀ ಕೃಷ್ಣ ಭಜನೆ ಮಾಡಲು ಶುರು ಮಾಡಿದರು . ಕನಕದಾಸರ ಭಕ್ತಿಗೆ ಮೆಚ್ಚಿ ಉಡುಪಿ ಶ್ರೀ ಕೃಷ್ಣನು ಗೋಡೆಯನ್ನು ಒಡೆದು ಕನಕದಾಸರಿಗೆ ದರ್ಶನವನ್ನು ನೀಡಿದನು . ಇಂದಿಗೂ ಉಡುಪಿಯಲ್ಲಿ ಶ್ರೀ ಕೃಷ್ಣನು ಕನಕದಾಸರಿಗೆ ದರ್ಶನವನ್ನು ನೀಡಿದ ಸ್ಥಳವನ್ನು ಕನಕನ ಕಿಂಡಿ ಎಂದು ಹೇಳಲಾಗುತ್ತದೆ. ಕನಕದಾಸರು ತಮ್ಮ ಗುರುಗಳಾದ ವ್ಯಾಸರಾಯರಲ್ಲಿ ತನ್ನ ಪುನರ್ಜನ್ಮದ ಬಗ್ಗೆ ಕೇಳಿದಾಗ ನಮಗಿಬ್ಬರಿಗೂ ಮುಂದೆ ಪುನರ್ಜನ್ಮವಿದೆ . ನನ್ನ ಮುಂದಿನ ಜನ್ಮದಲ್ಲಿ ನಾನು ನಿನಗೆ ಮೋಕ್ಷವನ್ನು ಕರುಣಿಸುವೆ ಎಂದು ವ್ಯಾಸರಾಯರು ಕನಕದಾಸರಿಗೆ ಹೇಳಿದ್ದರಂತೆ . ವ್ಯಾಸರಾಯರು ತನ್ನ ಮುಂದಿನ ಜನ್ಮದಲ್ಲಿ ಗುರು ರಾಘವೇಂದ್ರರಾಗಿ ಕನಕದಾಸರಿಗೆ ಮೋಕ್ಷವನ್ನು ಕರುಣಿಸಿದ ಕಥೆಯನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ

ಪ್ರದೀಪ್‌ ಚಿನ್ಮಯಿ ಆಸ್ಪತ್ರೆ ಕುಂದಾಪುರ

   

Related Articles

error: Content is protected !!