ಬೆಂಗಳೂರು : ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ದಿನ ದೇವರ ದರ್ಶನ ಸಾಧ್ಯವಾಗದ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಭೇಟಿ ನೀಡಲು ಸಜ್ಜಾಗಿದ್ದ ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಬ್ರೇಕ್ ಹಾಕಿದ್ದಾರೆ.
ಸದ್ಯ ನಿತ್ಯವೂ ಲಕ್ಷಾಂತರ ಪ್ರಮಾಣದಲ್ಲಿ ಜನಸಾಮಾನ್ಯರು ದೇವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇಂಥ ವೇಳೆ ಕೇಂದ್ರ ಸಚಿವರು, ರಾಜ್ಯ ಘಟಕಗಳ ನಾಯಕರು ಭೇಟಿ ನೀಡಿದರೆ ಭದ್ರತೆ ನೀಡುವುದು ಕಷ್ಟವಾಗುವುದರ ಜೊತೆಗೆ, ಜನಸಾಮಾನ್ಯರಿಗೂ ತೊಂದರೆಯಾಗುತ್ತದೆ. ಹೀಗಾಗಿ ಫೆಬ್ರವರಿ ತಿಂಗಳು ಮುಗಿವವರೆಗೂ ಅಯೋಧ್ಯೆಗೆ ಭೇಟಿ ನೀಡಬೇಡಿ ಎಂದು ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ವೇಳೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ