Home » ಪ್ರತಿಯೊಬ್ಬರು ಸಮಾನರು, ಈ ವಿಚಾರದಲ್ಲಿ ಭೇದವಿಲ್ಲ : ಮೋಹನ್ ಭಾಗ್ವತ್
 

ಪ್ರತಿಯೊಬ್ಬರು ಸಮಾನರು, ಈ ವಿಚಾರದಲ್ಲಿ ಭೇದವಿಲ್ಲ : ಮೋಹನ್ ಭಾಗ್ವತ್

ಅಭಿಪ್ರಾಯ ಭಿನ್ನವಿದ್ದರೂ ರಾಷ್ಟ್ರದ ಜನರ ಆತ್ಮಸಾಕ್ಷಿ ಒಂದೇ

by Kundapur Xpress
Spread the love

ಪ್ರತಿಯೊಬ್ಬರು ಸಮಾನರು, ಈ ವಿಚಾರದಲ್ಲಿ ಭೇದವಿಲ್ಲ : ಮೋಹನ್ ಭಾಗ್ವತ್

ಅಭಿಪ್ರಾಯ ಭಿನ್ನವಿದ್ದರೂ ರಾಷ್ಟ್ರದ ಜನರ ಆತ್ಮಸಾಕ್ಷಿ ಒಂದೇ

ಹೊಸದಿಲ್ಲಿ: ಅಭಿಪ್ರಾಯಗಳು ಭಿನ್ನ ಭಿನ್ನವಾಗಿದ್ದರೂ, ರಾಷ್ಟ್ರದ ಸಮಸ್ತ ಜನರ ಆತ್ಮಸಾಕ್ಷಿ ಮತ್ತು ಆತ್ಮಪ್ರಜ್ಞೆ ಸಮಾನವಾದುದು ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗ್ವತ್ ಹೇಳಿದ್ದಾರೆ. ಸಂತ ಶಿರೋಮಣಿ ರೋಹಿದಾಸರ 647ನೇ ಜನ್ಮದಿನೋತ್ಸವದಂದು ರವೀಂದ್ರ ನಾಟ್ಯ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗ್ವತ್ ಪಾಲ್ಗೊಂಡರು.  ಭಗವಂತನೊಬ್ಬನೇ ಶಾಶ್ವತ ಸತ್ಯ ಈ ಭೂವಿಯಲ್ಲಿ. ಒಬ್ಬ ವ್ಯಕ್ತಿಯ ಹೆಸರು, ಸಾಮರ್ಥ್ಯ ಮತ್ತು ಗೌರವಗಳೇನೇ ಇದ್ದರೂ, ಪ್ರತಿಯೊಬ್ಬರೂ ಇಲ್ಲಿ ಸಮಾನರು ಮತ್ತು ಈ ವಿಚಾರದಲ್ಲಿ ಭೇದ ಎಂಬುದಿಲ್ಲ. ಶಾಸ್ತ್ರಗಳ ನೆಪದಲ್ಲಿ ಕೆಲವು ಪಂಡಿತರು ಹುಸಿ ನುಡಿಯುತ್ತಾರೆ. ತನ್ನ ಜಾತಿ ಮೇಲು, ನಿನ್ನ ಜಾತಿ ಕೀಳೆಂಬ ಭ್ರಮೆಯಲ್ಲಿ ಜನರ ದಾರಿತಪ್ಪಿಸಲಾಗುತ್ತದೆ. ಹಾಗಾಗಿ ಮೊದಲು ಈ ಜಾತಿ ಕುರಿತ ಮೇಲರಿಮೆ – ಕೀಳಿರಿಮೆಗಳ ಸಂಕುಚಿತತೆಯಿಂದ ಹೊರಬರಬೇಕು ಎಂದು ಕರೆ ನೀಡಿದ್ದರು.ನಿಮ್ಮ ಧರ್ಮಗಳಿಗೆ ತಲೆಭಾಗಿ ಮತ್ತು ಧರ್ಮಾನುಸಾರ ನಿಮ್ಮ ಕರ್ತವ್ಯ ನಿಭಾಯಿಸಿ. ಸಮಾಜವನ್ನು ಒಗ್ಗೂಡಿಸಿ ಅದರ ಏಳಿಗೆಗಾಗಿ ದುಡಿಯಿರಿ. ಧರ್ಮವು ಪ್ರತಿಪಾದಿಸಿರುವುದು ಇದನ್ನೇ.

ಸತ್ಯ, ಕರುಣೆ, ಆಂತರಿಕ ಪರಿಶುದ್ಧತೆ, ನಿರಂತರ ಕಠಿಣ ದುಡಿಮೆ ಮತ್ತು ಪರಿಶ್ರಮ ಹೀಗೆ ನಾಲ್ಕು ಉದಾತ್ತ ಮಂತ್ರಗಳನ್ನು ಸಂತ ಶಿರೋಮಣಿ ರೋಹಿದಾಸರು ಸಮಾಜಕ್ಕೆ ಭೋದಿಸಿದ್ದರು. ಅದೇ ತರ ನಿಮ್ಮ ಸುತ್ತ ಏನೆಲ್ಲಾ ಬೆಳವಣಿಗೆಗಳು ಆಗುತ್ತವೋ ಅವೆಲ್ಲವನ್ನು ಗಮನಿಸಿ, ಆದರೆ ಯಾವ ಸನ್ನಿವೇಶದಲ್ಲೂ ನಿಮ್ಮ ಧರ್ಮವನ್ನು ಕೈಬಿಡಬೇಡಿ. ಧರ್ಮದ ಸಂದೇಶಗಳನ್ನು ಪ್ರಸಾರಿಸುವ ವಿಧಾನ ಬೇರೆ ಬೇರೆ ಇರಬಹುದು. ಆದರೆ ಎಲ್ಲಾ ಧರ್ಮಗಳ ಸಂದೇಶ ಮಾತ್ರ ಒಂದೇ ಆಗಿದೆ. ಪ್ರತಿಯೊಬ್ಬರೂ ಇನ್ನೊಬ್ಬರಿಗೆ ಯಾವುದೇ ತೆರನಾದ ತೊಂದರೆಯಾಗದ ರೀತಿ ಧರ್ಮಾಚರಣೆಗಳನ್ನು ಮಾಡಬೇಕು  ಎಂದು ಭಾಗ್ವತ್ ಸಲಹೆಯಿತ್ತರು.

   

Related Articles

error: Content is protected !!