Home » ಮನೆಯೊಳಗೆ ದೇವರ ದೀಪ ಹೇಗಿರಬೇಕು ?
 

ಮನೆಯೊಳಗೆ ದೇವರ ದೀಪ ಹೇಗಿರಬೇಕು ?

by Kundapur Xpress
Spread the love

ದೀಪ ಎಂದರೆ ಜ್ಞಾನ, ಜ್ಞಾನ ನಮ್ಮಲ್ಲಿ ನಮ್ಮ ಕುಟುಂಬದಲ್ಲಿ ನಮ್ಮ ಜೀವನದಲ್ಲಿ ಇರುವ ಅಜ್ಞಾನ ಮತ್ತು ಅಂಧಕಾರ ಕತ್ತಲೆಯನ್ನು ದೂರ ಮಾಡಿ ಜ್ಞಾನ ಅನ್ನುವಂತಹ ಜ್ಯೋತಿ ನಮ್ಮಲ್ಲಿ ನಮ್ಮ ಕುಟುಂಬದಲ್ಲಿ ಬೆಳಗಲಿ ಎನ್ನುವ ಭಾವನೆಯಿಂದ ದೀಪವನ್ನು ಹಚ್ಚಬೇಕು.’ತಸ್ಮತ್ ಶಾಸ್ತ್ರ ಪ್ರಮಾಣೇಶುಎಂದಂತೆ ಶಾಸ್ತ್ರದಲ್ಲಿರುವುದನ್ನು  ನಾವು ಹೇಳಬಹುದು ಎಳ್ಳೆಣ್ಣೆ,ತೆಂಗಿನಎಣ್ಣೆ ಮತ್ತು ತುಪ್ಪ ದೀಪಗಳು ಮನೆಯೊಳಗೆ ದೇವರ ಕೋಣೆಯಲ್ಲಿಡಲು ಯೋಗ್ಯ. ಇನ್ಯಾವುದೇ ತೈಲಗಳು ದೇವರಿಗೆ ಯೋಗ್ಯವಲ್ಲತಿಲವು ಪಾಪಹರವಾದರೆ, ಘೃತವು ಮೋಕ್ಷದಾಯಕ. ತೆಂಗಿನ ಎಣ್ಣೆ ಸಾತ್ವಿಕ ವಾತಾವರಣವನ್ನು ಹೆಚ್ಚಿಸುತ್ತದೆ

ಒಂದು ಸ್ಥಂಬದಲ್ಲಿ ಒಂದೇ ದೀಪ ಉರಿಯ ಬೇಕು ಅಥವಾ ದೀಪ ನಮಸ್ಕಾರ, ಉದ್ಘಾಟನೆಗಳ ಸಂದರ್ಭಗಳಲ್ಲಿ ಐದು (ಅದಕ್ಕಿಂತ ಹೆಚ್ಚು) ದೀಪ ಒಂದೇ ಸ್ಥಂಭದಲ್ಲಿ ಉರಿಯ ಬೇಕು.

ಎರಡು ದೀಪ ಒಂದೇ ಸ್ಥಂಭದಲ್ಲಿದ್ದರೆ ತೊಂದರೆ ಇಲ್ಲ ಆದರೆ ಮೂರು ಇದ್ದರೆ ಮರಣ ಸೂಚಕ.(ಒಂದೇ ಸ್ಥಂಭದಲ್ಲಿದ್ದರೆ) ನಾಲ್ಕು ಇದ್ದರೆ ಗೊಂದಲ. ಐದು ದೀಪಗಳು ಆರಾಧನೆಗೆ ಮಾತ್ರ.

ಇದರಲ್ಲಿ ಬತ್ತಿಗಳ ಪ್ರಮಾಣ:  ಎರಡು ಬತ್ತಿ ದೇಹ ಮತ್ತು ಪ್ರಾಣಗಳ ಸಂಕೇತ ಮೂರು ಬತ್ತಿ ತ್ರಿಶಕ್ತಿ ರೂಪ ನಾಲ್ಕು ಬತ್ತಿಯು ಉತ್ತಮವಲ್ಲ ಐದು ಬತ್ತಿಗಳು ಪಂಚಭೂತಗಳ ಸಂಕೇತಆದರೂ ಎರಡು ಬತ್ತಿಯೇ ಮನೆಗಳಲ್ಲಿ ಶ್ರೇಷ್ಟ. ದೀಪ ಸ್ಥಂಭ, ದೀಪದ  ತೈಲ ಮಲಿನ ಆಗಿರ ಬಾರದು. ಹಾತೆ, ಕೀಟಾದಿಗಳು ಬಿದ್ದಿದ್ದರೆ ಅದನ್ನು ಶುಚಿಯಾಗಿಡ ಬೇಕು. ಎಳ್ಳೆಣ್ಣೆ ಮತ್ತು ತುಪ್ಪ ಮಿಶ್ರಣವಾಗಲೇ ಬಾರದು.

ದೇವರ ದೀಪವನ್ನು ದೇವರ ಬಲ ಭಾಗದಲ್ಲಿಡ ಬೇಕು. ಮನೆಯ ದೇವರಿಗೆ ಎರಡು ದೀಪಗಳು ತುಂಬಾ ಉತ್ತಮ ದೀಪದ ಮುಖ ಯಾವಾಗಲೂ ನಮ್ಮ ಅಂದರೆ ಪೂಜಿಸುವವರ ಕಡೆಗೆ, ಪೂರ್ವಾಭಿಮುಖ, ಉತ್ತರಾಭಿಮುಖ ಅಥವಾ ದೇವರ ಕಡೆ ಸ್ವಲ್ಪ ವಾಲುವಂತೆಯೂ ಇಡ ಬಹುದು. ಇದು ಶಾಸ್ತ್ರೋಕ್ತವಾದ ಪದ್ಧತಿ

*ನಂದಾದೀಪ: ** o ಎಂದರೆಭಗವಂತ (ಆನಂದೋ ನಂದನೋ ನಂದಃ ವಿಷ್ಣುಸಹಸ್ರನಾಮ) ನಂದಯತಿ ಭಕ್ತಾನ್ ಇತಿನಂದಃ. ದೀಪವನ್ನು ಹಚ್ಚಿ ಮಾಡಿದ ಭಜನೆ, ಜಪಪಾರಾಯಣ, ಸ್ತೋತ್ರಗಳು, ದೇವರಲ್ಲಿ ನಾವು ಮನಸ್ಪೂರ್ವಕವಾಗಿ ಮಾಡಿದ ಸರ್ವ ನಿವೇದನೆಗಳನ್ನು ಪರಮಾತ್ಮನ ಪದತಲಕ್ಕೆ ಕೊಂಡು ಹೋಗುವ ಶಕ್ತಿ ದೀಪಕ್ಕೆ ಇದೆ

 ಸಂಧ್ಯಾಕಾಲದಲ್ಲಿ  ದೇವರ ಮುಂದೆ ಹಚ್ಚಿದ ದೀಪ ಮನೆಯಲ್ಲಿ ಸಾತ್ವಿಕ ವಾತಾವರಣವನ್ನು ತರುತ್ತದೆ . ದೀಪ ಬೆಳಗುತ್ತಿರುವ ಮನೆಯಲ್ಲಿ ಅಲಕ್ಷ್ಮಿಯು ಸುಳಿಯಲಾರಳು. ದಾರಿದ್ರ್ಯವು ಬರಲಾರದು. ಲಕ್ಷ್ಮೀದೇವಿಯ ಸನ್ನಿಧಾನ ದೀಪದಲ್ಲಿ ಇರುವುದರಿಂದ ದೀಪಕ್ಕೆ ಅರಶಿನ ಕುಂಕುಮ ಹೂಗಳಿಂದ ಅಲಂಕರಿಸುತ್ತೇವೆ. ಶಿವ ಪುರಾಣದ ಪ್ರಕಾರ ದೇವರ ಮುಂದೆ ದೀಪ ಹಚ್ಚುವುದರಿಂದ ಮನೆಯಲ್ಲಿ ಸಂತೋಷ, ನೆಮ್ಮದಿ, ಸಂಪತ್ತು ಹಾಗೂ ಆರೋಗ್ಯ ವೃದ್ಧಿಸುತ್ತದೆ.

ದೀಪಕ್ಕೆ ವಿಶೇಷ ಕಳೆ ಇದೆ. ದೀಪಗಳ ಸುತ್ತ ಪ್ರಭೆಯಿದೆ, ಪ್ರಕಾಶವಿದೆ, ಶಾಖವಿದೆ. ಒಂಥರಾ ಆಹ್ಲಾದಕರ ಸುವಾಸನೆಯಿದೆ.ದೀಪವು ಮನದ ಕ್ಲೇಶವನ್ನು ಕಳೆಯುತ್ತದೆ, ಜ್ಞಾನಕ್ಕೂ ದೀಪಕ್ಕೂ ಇರುವ ಸಾಮಾನ್ಯತೆ ಎಂದರೆ ದೀಪ ಕತ್ತಲೆಯನ್ನು ಕಳೆಯುವ ಹಾಗೆ ಓದುಜ್ಞಾನಾರ್ಜನೆ ನಮ್ಮ ಮನದ ಕತ್ತಲೆಯನ್ನು ಓಡಿಸುತ್ತದೆ. ಅದಕ್ಕೇ ಹೇಳೋದು  ತಮಸೋಮಾ ಜ್ಯೋತಿರ್ಗಮಯ

ಪರಮಾತ್ಮನು ಜಗತ್ತಿನ ಸೂರ್ಯ, ಚಂದ್ರ, ನಕ್ಷತ್ರ, ಅಗ್ನಿ ಮುಂತಾದ ಸಮಸ್ತ ತೇಜಸ್ಸಿಗೂ ಮೂಲಭೂತನಾಗಿ, ಆಶ್ರಯನಾಗಿ, ಪ್ರೇರಕನಾಗಿ, ಸ್ವಯಂ ಅನಂತ ತೇಜೋಮಯನಾದ ದೀಪನಾಗಿದ್ದಾನೆ. ಹಾಗಾಗಿ ನಮಗೆಲ್ಲವನ್ನೂ ಕೊಟ್ಟ ಪರಮಾತ್ಮನನ್ನು ದೀಪಗಳಿಂದ ಪೂಜಿಸಿಕೃತಾರ್ಥರಾಗೋಣ.

ಸ್ವರ್ಣ ಕುಂದಾಪುರ

   

Related Articles

error: Content is protected !!