ರಾಘವೇಂದ್ರ ಸ್ವಾಮಿಗಳು 1671 ಆಗಸ್ಟ್ 21 ವಿರೋಧಿನಾಮ ಸಂವತ್ಸರ ಶ್ರಾವಣ ಕೃಷ್ಣ ಬಿದಿಗೆ ಗುರುವಾರದಂದು ಸಶರೀರವಾಗಿ ಬೃಂದಾವನ ಪ್ರವೇಶಿಸಿದರು. ರಾಯರು ಬೃಂದಾವನ ಪ್ರವೇಶಿಸುವ ಮುನ್ನ ಮೂಲ ರಾಮಚಂದ್ರ ದೇವರ ಪೂಜೆಯನ್ನು ನೆರವೇರಿಸಿ ಅಂಗಾರಕ ಅಕ್ಷತೆ ಧಾರಣೆಯನ್ನು ಮಾಡಿ ಸೇರಿದ ಜನಸ್ತೋಮದತ್ತ ಕಿರುನಗೆಯನ್ನು ಬೀರಿ ನಾನು ಈಗ ಸಶರೀರವಾಗಿ ಬೃಂದಾವನಸ್ಥನಾಗುತ್ತಿದ್ದೇನೆ ಬೃಂದಾವನದೊಳಗಿಂದಲೇ ಭಕ್ತರನ್ನು ಹರಸುತ್ತೇನೆ ಎಂದರು. ಹರಿಯು ಸರ್ವೋತ್ತಮ ಹರಿಯ ಆಜ್ಞೆಯಂತೆ ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳು ಎಲ್ಲಾ ವಸ್ತುಗಳು ಎಲ್ಲಾ ಘಟನೆಗಳು ನಡೆಯುವುದು ಎಂದು ಹೇಳಿ ಬೃಂದಾವನರೊಳಗೆ ಪ್ರವೇಶಿಸಿದರು. ರಾಯರ ಬೃಂದಾವನ ಆರು ಅಡಿಗಳಷ್ಟಿತ್ತು ಕೈಯಲ್ಲಿ ಕಮಂಡಲ, ಸೊಂಟದಲ್ಲಿ ಕೃಷ್ಣಾಜಿನ, ಕೈಯಲ್ಲಿ ತುಳಸಿ ಮಾಲೆ ಹಿಡಿದುಕೊಂಡು ಬೃಂದಾವನದ ಒಳಗೆ ಪ್ರವೇಶಿಸಿದರು. ಬೃಂದಾವನದೊಳಗೆ ಕೃಷ್ಣಾಜಿನವನ್ನು ಹಾಸಿ ಪೂರ್ವ ದಿಕ್ಕಿಗೆ ಮುಖ ಮಾಡಿ ಧ್ಯಾನಸ್ಥರಾದರು . ರಾಘವೇಂದ್ರ ಸ್ವಾಮಿಗಳು ತನ್ನ ಪ್ರಿಯ ಶಿಷ್ಯ ವೆಂಕಣ್ಣನಿಗೆ ಬೃಂದಾವನ ಸ್ಥಾಪಿಸಲು ಹೇಳಿದಾಗ ಅಲ್ಲಿನ ವೈಶಿಷ್ಟ್ಯತೆಗಳನ್ನು ಸವಿಸ್ತಾರವಾಗಿ ತಿಳಿಸಿದರಂತೆ . ರಾಘವೇಂದ್ರ ಸ್ವಾಮಿಗಳು ಬೃಂದಾವನ ಸ್ಥಾಪಿತವಾಗಿರುವ ಕ್ಷೇತ್ರ ಅತ್ಯಂತ ಶ್ರೇಷ್ಠವಾಗಿರುವಂತಹ ಕ್ಷೇತ್ರ . ಪ್ರಹಲ್ಲಾದನು ವಿಷ್ಣುವಿನ ಯಾಗವನ್ನು ಮಾಡಿದಂತಹ ಕ್ಷೇತ್ರ , ರಾಮ ಲಕ್ಷ್ಮಣರು ಸೀತಾನ್ವೇಷಣೆಗೆ ಬಂದಾಗ ರಾಮನ ಪಾದ ಧೂಳಿಯಿಂದ ಪವಿತ್ರವಾದಂತಹ ಕ್ಷೇತ್ರ . ಪಾಂಡವರು ಅಶ್ವಮೇಧ ಯಾಗ ಮಾಡಿ ಅಶ್ವಮೇಧದ ಕುದುರೆಯನ್ನು ಕಟ್ಟಿದ ಅನುಸಾಲ್ವನನ್ನು ಅರ್ಜುನನು ಶ್ರೀ ಕೃಷ್ಣನ ಸಹಾಯದಿಂದ ಸೋಲಿಸಿದ ಕ್ಷೇತ್ರ . ರಾಘವೇಂದ್ರ ಸ್ವಾಮಿಗಳು 700 ವರ್ಷಗಳ ಕಾಲ ನಿರಂತರವಾಗಿ ಬೃಂದಾವನದಲ್ಲಿ ಇರುವರು ಎಂದು ವೆಂಕಣ್ಣನಿಗೆ ತಿಳಿಸಿದ್ದರಂತೆ . ರಾಘವೇಂದ್ರ ಸ್ವಾಮಿಗಳ ಬೃಂದಾವನದಲ್ಲಿ ಏಳುನೂರು ಮಹಾ ವಿಷ್ಣುವಿನ ಸಾಲಿಗ್ರಾಮಗಳಿವೆ. ರಾಘವೇಂದ್ರ ಸ್ವಾಮಿಗಳ ಆರಾಧನೆಯು ಪ್ರತಿ ವರ್ಷವೂ ವಿಜೃಂಭಣೆಯಿಂದ ಮಂತ್ರಾಲಯದಲ್ಲಿ ಆಚರಿಸಲಾಗುತ್ತದೆ. ರಾಘವೇಂದ್ರ ಸ್ವಾಮಿಗಳು ಸೃಷ್ಟಿಸಿದ ಪವಾಡಗಳು ಅನೇಕ . ರಾಘವೇಂದ್ರ ಸ್ವಾಮಿಗಳು ಪ್ರಹಲ್ಲಾದ ಜನ್ಮವೆತ್ತಿದಾಗ ನರಸಿಂಹ ಸ್ವಾಮಿಯಲ್ಲಿ ಯಾರ ಬಳಿಯೂ ನಾನು ಏನು ಕೇಳಲು ಕೈ ಚಾಚ ಬಾರದು ಎಂಬ ವರವನ್ನು ಕೇಳಿದ್ದರಂತೆ . ರಾಘವೇಂದ್ರ ಸ್ವಾಮಿಗಳ ಆರಾಧನೆಯು ಆಗಸ್ಟ್ 29 ರಿಂದ ಸೆಪ್ಟೆಂಬರ್ 4 ರವರೆಗೆ ನಡೆಯಲಿದೆಪ್ರದೀಪ್,ಚಿನ್ಮಯಿ ಆಸ್ಪತ್ರೆ