ಮಂತ್ರಾಲಯ- ರಾಮ ಮತ್ತು ಕೃಷ್ಣರನ್ನು ಭಕ್ತಿಯಿಂದ ಪೂಜಿಸಿ ಹೃದಯದಲ್ಲಿಟ್ಟುಕೊಂಡ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಗುರುವಾರ ಬರುತ್ತದೆ ಎಂದಾಗ ನಮಗೆ ನೆನಪಾಗುವುದು ರಾಘವೇಂದ್ರ ಸ್ವಾಮಿಗಳ ವಾರ ಬಂತಮ್ಮ ಗುರು ರಾಯರ ನೆನೆಯಮ್ಮ ಈ ಭಕ್ತಿ ಗೀತೆ ಎಲ್ಲರ ಪಾಲಿನ ಪ್ರಿಯವಾದ ರಾಯರ ಭಕ್ತಿಗೀತೆ. ಒಂದು ಬಾರಿ ಬಂದು ನೋಡು ಮರೆಯದು ಜೀವ ಮಂತ್ರಾಲಯ ದರ್ಶನವೇ ದಿವ್ಯ ಅನುಭವ ಈ ಭಕ್ತಿ ಗೀತೆ ಕೂಡ ನಮ್ಮನ್ನು ರಾಯರ ಭಕ್ತಿಯಲ್ಲಿ ತೇಲುವಂತೆ ಮಾಡುತ್ತದೆ
ಮಂತ್ರಾಲಯ ಇದು ರಾಘವೇಂದ್ರ ಸ್ವಾಮಿಗಳ ಬೃಂದಾವನ ಇರುವ ಪವಿತ್ರ ಕ್ಷೇತ್ರ . ಮಂತ್ರಾಲಯ ವಿರುವುದು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿರುವ ಒಂದು ಊರು. ಮಂತ್ರಾಲಯವಿರುವುದು ತುಂಗಭದ್ರ ನದಿಯ ತಟದಲ್ಲಿ. ಮಂತ್ರಾಲಯದ ಮೊದಲ ಹೆಸರು ಮಂಚಾಲೆ ಎಂದು. ಮಂತ್ರಾಲಯದ ದೇವತೆ ಮಂಚಾಲಾಂಬಿಕೆ ಇದ್ದದ್ದರಿಂದ ಮಂತ್ರಾಲಯಕ್ಕೆ ಮಂಚಾಲೆ ಎಂದು ಕರೆಯುತ್ತಿದ್ದರು ಎಂಬುದು ಪುರಾಣಗಳ ಪ್ರತೀತಿ . ಇತಿಹಾಸದ ಪುರಾಣಗಳ ಪ್ರಕಾರ ಈ ಪ್ರದೇಶ ಹಿಂದೆ ಪ್ರಹಲ್ಲಾದನು ತನ್ನ ಕುಲದೇವತೆಯಾದ ಮಂಚಾಲಮ್ಮನನ್ನು ಆರಾಧಿಸಿ ಯಜ್ಞ ಮಾಡಿದ ಪ್ರದೇಶ ಎಂದು ಹೇಳಲಾಗಿದೆ ಗುರು ರಾಘವೇಂದ್ರ ಸ್ವಾಮಿಗಳ ಹಿಂದಿನ ಜನ್ಮವೇ ಭಕ್ತ ಪ್ರಹ್ಲಾದ ಎಂದು ರಾಯರು ಅವರ ಭಕ್ತನಾದ ವೆಂಕಣ್ಣ ಪಂಡಿತರಲ್ಲಿ ಹೇಳಿಕೊಂಡಿದ್ದರಂತೆ. ರಾಘವೇಂದ್ರ ಸ್ವಾಮಿಗಳ ಗ್ರಹಸ್ಥಾಶ್ರಮದಲ್ಲಿದ್ದಾಗ ಅವರ ಹೆಸರು ವೆಂಕಟನಾಥ ಎಂಬುದಾಗಿತ್ತು. ಶ್ರೀ ಸುಧೀಂದ್ರ ತೀರ್ಥರು ತನ್ನ ಸ್ಥಾನಕ್ಕೆ ಉತ್ತರಾಧಿಕಾರಿಯನ್ನು ಹುಡುಕುತ್ತಿದ್ದಾಗ ಶ್ರೀರಾಮನೇ ಕನಸಿನಲ್ಲಿ ಬಂದು
ರಾಘವೇಂದ್ರ ಸ್ವಾಮಿಗಳ ಹೆಸರನ್ನು ಹೇಳಿದ್ದನಂತೆ.ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಸರಸ್ವತಿಯೇ ಕನಸಿನಲ್ಲಿ ಬಂದು ಬಂದು ಸನ್ಯಾಸತ್ವವನ್ನು ತೆಗೆದುಕೊಳ್ಳಲು ಹೇಳಿದಳಂತೆ. ಶ್ರೀ ರಾಘವೇಂದ್ರ ಸ್ವಾಮಿಗಳು ಸಶರೀರವಾಗಿ ಬೃಂದಾವನ ದಲ್ಲಿರುವರು ಎಂದು ಈಗಲೂ ಭಕ್ತರು ಹೇಳುವರು. ಕ್ರಿ.ಶ 1671 ಶ್ರಾವಣ ಬಹುಳ ಬಿದಿಗೆಯ ದಿನ ಗುರುವಾರ ಸಶರೀರವಾಗಿ ಬೃಂದಾವನಸ್ಥರಾದರು. ರಾಘವೇಂದ್ರ ಸ್ವಾಮಿಯ ಬೃಂದಾವನದ ಎದುರಿಗೆ ವಾಯುದೇವರ ವಿಗ್ರಹವಿದೆ. ಮಠದ ಹೊರಗಡೆ ಎಡಭಾಗದಲ್ಲಿ ಮಂಚಾಲಾಂಬಿಕೆಯ ದೇವಸ್ಥಾನವಿದೆ. ರಾಯರು ಸೃಷ್ಟಿಸಿದ ಪವಾಡಗಳು ಅನೇಕ . ಸುಮಾರು 700 ವರ್ಷಗಳಿಂದ ರಾಯರು ಇನ್ನೂ ಇಲ್ಲಿ ನೆಲೆಸಿರುವರೆಂದು ಭಕ್ತರು ಹೇಳುತ್ತಾರೆ. ಇದಕ್ಕೆ ಇಲ್ಲಿ ಬರುವಂತಹ ಸಾವಿರಾರು ಭಕ್ತರೇ ಸಾಕ್ಷಿ
ಪ್ರದೀಪ್ ಚಿನ್ಮಯಿ ಆಸ್ಪತ್ರೆ ಕುಂದಾಪುರ