Home » ರೋಜರಿ ಮಾತಾ ಚರ್ಚಿನಲ್ಲಿ ಸಂಭ್ರಮದ ವಾರ್ಷಿಕ ಹಬ್ಬ
 

ರೋಜರಿ ಮಾತಾ ಚರ್ಚಿನಲ್ಲಿ ಸಂಭ್ರಮದ ವಾರ್ಷಿಕ ಹಬ್ಬ

by Kundapur Xpress
Spread the love

ರೋಜರಿ ಮಾತಾ ಚರ್ಚಿನಲ್ಲಿ ಸಂಭ್ರಮದ ವಾರ್ಷಿಕ ಹಬ್ಬ
ಕುಂದಾಪುರ ರೋಜರಿ ಅಮ್ಮನವರ ಚರ್ಚಿನಲ್ಲಿ 332 ವರ್ಷಗಳ ಹಿಂದೆ ಪ್ರಪ್ರಥಮವಾಗಿ ಭಾರತೀಯ ಕೊಂಕಣಿ ಭಾಷಿಕನಾಗಿ ಸೇವೆ ಸಲ್ಲಿಸಲು ಅವಕಾಶ ಪಡೆದ ಧರ್ಮಗುರು ಜೋಸೆಫ್ ವಾಜ್ ಅವರ ವಾರ್ಷಿಕ ಹಬ್ಬವು ವಲಯ ಮಟ್ಟದಲ್ಲಿ ಆಚರಿಸಲಾಯಿತು.
ಸಂತ ಜೋಸೆಫ್ ವಾಜರ ವಾರ್ಷಿಕ ಹಬ್ಬದಂದು ಮಂಗಳೂರು ದೆರೆಬೈಲ್ ಚರ್ಚಿನ ಧರ್ಮಗುರು ವಂ|ಜೋಸೆಫ್ ಮಾರ್ಟಿಸ್ ಪವಿತ್ರ ಬಲಿದಾನವನ್ನು ಅರ್ಪಿಸಿ “ಸಂತ ಜೋಸೆಫ್ ವಾಜ್ ಕ್ರಿಸ್ತನ ಸೇವಕಾನಾಗಿದ್ದರು ಇಂತಹ ಮಾಹಾನ ಸಂತರು ನಿಮ್ಮ ಇಗರ್ಜಿಯ ಧರ್ಮಗುರುಳಾಗಿದ್ದವರೆಂದು ನೀವು ತುಂಬಾ ಹೆಮ್ಮೆ ಪಟ್ಟುಕೊಳ್ಳ ಬೇಕೆಂದು’ ಅವರು ಸಂದೇಶ ನೀಡಿದರು.
ಈ ವಾರ್ಷಿಕ ಹಬ್ಬದಲ್ಲಿ ಪಿಯುಸ್ ನಗರ್ ಇಗರ್ಜಿಯ ಧರ್ಮಗುರು ವಂ|ಆಲ್ಬರ್ಟ್ ಕ್ರಾಸ್ತಾ, ತಲ್ಲೂರು ಇಗರ್ಜಿಯ ಧರ್ಮಗುರು ವಂ|ಎಡ್ವಿನ್ ಡಿಸೋಜಾ, ಕುಂದಾಪುರ ಇಗರ್ಜಿಯ ಸಹಾಯಕ ಧರ್ಮಗುರು ವಂ|ಅಶ್ವಿನ್ ಅರಾನ್ಹಾ  ಭಾಗಿಯಾಗಿದ್ದರು.

 

 

Related Articles

error: Content is protected !!