Home » ಶರಾವತಿ ಕನ್ನಡ ನಾಡಿನ ಭಾಗೀರಥಿ
 

ಶರಾವತಿ ಕನ್ನಡ ನಾಡಿನ ಭಾಗೀರಥಿ

by Kundapur Xpress
Spread the love

ಜೋಗ ಜಲಪಾತವನ್ನು ನೋಡುವುದೇ ಒಂದು ಸುಂದರ ಅನುಭವ  ಶರಾವತಿ ನದಿಯು ಉಗಮವಾದ ಚರಿತ್ರೆಯನ್ನು ಕೇಳಿದಾಗಲೇ ಮೈ ರೋಮಾಂಚನವಾಗುತ್ತದೆ ಶರಾವತಿ  ನದಿಯ ಉಗಮ ಸ್ಥಾನದ ಹೆಸರು ಅಂಬುತೀರ್ಥ ಈ ಅಂಬುತೀರ್ಥ ತೀರ್ಥಹಳ್ಳಿಯಿಂದ ಸುಮಾರು 18 ಕಿಲೋಮೀಟರ್ ದೂರದಲ್ಲಿದೆ

ಇಲ್ಲಿರುವ ಶಿವ ದೇವಾಲಯದಲ್ಲಿರುವ ಶಿವನ ಪಾದದ ಬಳಿಯಿಂದ ಹುಟ್ಟುವ ಶರಾವತಿ ನದಿ ಅಲ್ಲಿರುವ ಕೊಳ್ಳವೊಂದಕ್ಕೆ ಹರಿದು ನಂತರ ಗುಪ್ತಗಾಮಿನಿಯಾಗಿ ಹರಿದು ಹೊಸನಗರ ಸಾಗರ ಶಿರ್ಸಿ ಗೇರುಸೊಪ್ಪ ಮೂಲಕ ನದಿಯಾಗಿ, ನಂತರ ಹಲವು ಉಪನದಿಗಳಿಂದ ಕೂಡಿಕೊಂಡು ಸುಮಾರು 128 ಕಿಮೀ ಹರಿದು ಅರಬ್ಬಿ ಸಮುದ್ರ ಸೇರುತ್ತದೆ ಶರಾವತಿಯ ಹೆಸರು ಕೇಳಿದಾಗಲೇ ನಮಗೆ ನೆನಪಾಗುವುದು ವಿಶ್ವ ವಿಖ್ಯಾತ ಜೋಗ ಜಲಪಾತ 

ಪುರಾಣಗಳ ಇತಿಹಾಸದ ಪ್ರಕಾರ ಶರಾವತಿ ನದಿಯು ಉಗಮವಾದದ್ದು ಶ್ರೀರಾಮಚಂದ್ರನ ಬಾಣದಿಂದ ತ್ರೇತಾಯುಗದಲ್ಲಿ ರಾಮನು ಅರಣ್ಯವಾಸದಲ್ಲಿದ್ದಾಗ ಸೀತಾ ಸಮೇತನಾಗಿ ಇಲ್ಲಿ ನೆಲೆಸಿದ್ದನಂತೆ ಆ ಸಮಯದಲ್ಲಿ ತಮ್ಮ ನಿತ್ಯದ ಪೂಜಾಕಾರ್ಯ  ಬಾಯಾರಿಕೆ ನೀಗಿಸುವ ಪ್ರಯುಕ್ತ ಹಾಗೂ ಇತರ ಕಾರ್ಯಗಳಿಗಾಗಿ ಬೇಕಾಗುವ ನೀರನ್ನು ಹೊಂದುವ ಸಲುವಾಗಿ ನೆಲಕ್ಕೆ ಬಾಣವನ್ನು ಬಿಟ್ಟಾಗ ತೀರ್ಥೋದ್ಭವವಾಯಿತಂತೆ. ಅಂಬು ಅಥವಾ ಬಾಣ ಬಿಟ್ಟಾಗ ಈ ತೀರ್ಥ ಉದ್ಭವವಾದ್ದರಿಂದ ಇದಕ್ಕೆ ಅಂಬು ತೀರ್ಥವೆಂದು ಹೆಸರಾಗಿದೆ ಶ್ರೀರಾಮನ ಶರದಿಂದ ಹುಟ್ಟಿದ್ದರಿಂದ ಈ ನದಿಗೆ ಶರಾವತಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ ಇಲ್ಲಿರುವ ಶಿವಲಿಂಗವನ್ನು ಶ್ರೀರಾಮನು ಸೀತಾ ಸಮೇತನಾಗಿ ಪೂಜಿಸುತ್ತಿದ್ದನೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ

ಪ್ರದೀಪ್‌ ಚಿನ್ಮಯಿ ಆಸ್ಪತ್ರೆ ಕುಂದಾಪುರ

 

   

Related Articles

error: Content is protected !!