ಭೀಕರ ರೈಲು ದುರಂತ 250 ಕ್ಕೂ ಅಧಿಕ ಸಾವು
ಬೆಂಗಳೂರು: ಓಡಿಶಾದ ಬಾಲಸೋರ್ ನ ಬಹನಾಗ ಬಳಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 250 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು 900 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಗಾಯಳುಗಳನ್ನು ಅಂಬುಲೆನ್ಸ್ ಮೂಲಕ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ
ತುರ್ತು ಪರಿಹಾರ ಕಾರ್ಯವನ್ನು ರೈಲ್ವೆ ಇಲಾಖೆ ಕೈಗೊಂಡಿದ್ದು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ
ಬಾಲಸೋರ್ ನ ಬಹನಾಗ ರೈಲ್ವೆ ನಿಲ್ದಾಣದ ಬಳಿ ಶಾಲಿಮಾರ್-ಕೋರ್ ಮಂಡಲ್ ಎಕ್ಸ್ ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದ ಪರಿಣಾಮ ಕೆಲವು ಭೋಗಿಗಳು ವಿರುಧ್ದ ದಿಕ್ಕಿನ ಹಳಿಯಲ್ಲಿ ಬಿದ್ದಿದ್ದು ಅದೇ ಹಳಿಯ ಮೇಲೆ ಯಶವಂತಪುರದಿಂದ ಹೌರಾಗೆ ತೆರಳುತ್ತಿದ್ದ ರೈಲು ಹಳಿಯ ಮೇಲೆ ಬಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಅದರ 3 ರಿಂದ 4 ಬೋಗಿಗಳು ಹಳಿ ತಪ್ಪಿದೆ ಎಂದು ತಿಳಿದು ಬಂದಿದೆ
ಮೋದಿ ಸಂತಾಪ: ರೈಲ್ವೆ ದುರ್ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ
ದುರಂತದಲ್ಲಿ ಮೃತಪಟ್ಟವರಿಗೆ ಕೇಂದ್ರ ಸರಕಾರದಿಂದ 10 ಲಕ್ಷ ಗಂಭೀರ ಗಾಯಗೊಂಡವರಿಗೆ 2 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ 50 ಸಾವಿರ ಪರಿಹಾರವನ್ನು ಘೋಷಿಸಿದ್ದಾರೆ