ರಾಮಭಕ್ತ ತುಳಸಿದಾಸರು
ಸಂಸಾರಿಯಾಗಿದ್ದವ ಪತ್ನಿಯ ಒಂದೇ ಮಾತಿನಿಂದ ಮಹಾನ್ ರಾಮ ಭಕ್ತನಾದ ಆತ ಬೇರೆ ಯಾರು ಅಲ್ಲ ಮಹಾನ್ ರಾಮ ಭಕ್ತ ತುಳಸಿದಾಸ . ತುಳಸಿದಾಸರು ವಾಲ್ಮೀಕಿಯ ಪುನರ್ಜನ್ಮ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ . ಈ ಮಹಾನ್ ರಾಮಭಕ್ತ ರಚಿಸಿದ ಕೃತಿ ಶ್ರೀರಾಮ ಚರಿತ ಮಾನಸ ಹನುಮಾನ್ ಚಾಲೀಸ್ ಕೂಡ ತುಳಸಿದಾಸರ ರಚನೆ ರತ್ನವಲ್ಲಿ ತುಳಸಿ ದಾಸರ ಪತ್ನಿ
ಒಂದು ದಿನ ತುಳಸಿದಾಸರು ಹನುಮಾನ್ ದೇವಾಲಕ್ಕೆ ಹೋಗಿ ಬಂದಾಗ ಅವರ ಪತ್ನಿ ತವರು ಮನೆಗೆ ಹೋಗಿದ್ದಾರೆ ಎಂದು ತಿಳಿದು ತುಳಸಿದಾಸರು ಭೋರ್ಗರೆಯುವ ಮಳೆಯ ನಡುವೆಯೂ ಯಮುನಾ ನದಿಯನ್ನು ದಾಟಿ ಪತ್ನಿಯನ್ನು ಕಾಣಲು ಪತ್ನಿ ತವರು ಮನೆಗೆ ಹೋದರು
ಮುನಿಸಿಕೊಂಡ ಆತನ ಪತ್ನಿ ಹೇಳಿದ ಒಂದು ಮಾತು “ಇಷ್ಟೆಲ್ಲಾ ಕಷ್ಟಪಟ್ಟು ನದಿಯನ್ನು ದಾಟಿ ನನ್ನನ್ನು ಕಾಣಲು ಬರುವ ಬದಲು ರಾಮನ ಧ್ಯಾನ ಮಾಡಿದರೆ ದೇವರಾದರು ಸಿಗುತ್ತಿದ್ದ” ಎಂಬ ಮಾತು ತುಳಸೀದಾಸರ ಜೀವನವೇ ಬದಲಾಗಿ ಮಹಾನ್ ರಾಮನ ಭಕ್ತನಾಗಲು ಪ್ರೇರೇಪಿಸಿತು
ನಂತರ ಸಂಸಾರವನ್ನು ತೊರೆದು ರಾಮ ಭಕ್ತನಾದ ತುಳಸೀದಾಸರು ಅನೇಕ ಕೃತಿಗಳನ್ನು ಬರೆದಿದ್ದಾರೆ ಅಕ್ಬರನು ತುಳಸಿದಾಸರನ್ನು ಸೆರೆಮನೆಯಲ್ಲಿಟ್ಟಾಗ ತುಳಸಿದಾಸರು ಹನುಮನ ಬಗ್ಗೆ ಬರೆದಂತಹ 40 ಸಾಲುಗಳ ಹನುಮಾನ್ ಚಾಲೀಸಾ ಪವಾಡವೇ ಸೃಷ್ಟಿಸಿದೆ
ಪ್ರದೀಪ್ ಚಿನ್ಮಯಿ ಅಸ್ಪತ್ರೆ ಕುಂದಾಪುರ