Home » ರಾಜ್ಯ ಮಟ್ಟದ ಭಜನಾ ಸ್ಪರ್ಧಾ ಕಮ್ಮಟ
 

ರಾಜ್ಯ ಮಟ್ಟದ ಭಜನಾ ಸ್ಪರ್ಧಾ ಕಮ್ಮಟ

by Kundapur Xpress
Spread the love

ಆನೆಗುಡ್ಡೆ : ಕಲಿಯುಗದಲ್ಲಿ ಭಜನೆಯಿಂದ ಭಗವಂತನ‌ನ್ನು ಶೀಘ್ರವಾಗಿ ಮೆಚ್ಚಿಸಿ ಅನುಗ್ರಹಕ್ಕೆ ಪಾತ್ರರಾಗಬಹುದು ಎಂಬುದಾಗಿ ನಮ್ಮ ಪೂರ್ವಜರು ಹಾಗೂ ದಾಸ ಶ್ರೇಷ್ಟರು ಕಂಡು ಕೊಂಡಿದ್ದಾರೆ. ಇದು ನಮ್ಮ ಸಂಸ್ಕೃತಿಯ ಉನ್ನತಿಗೂ ಕಾರಣವಾಗಿದೆ. ಮನೆ ಮನೆಯಲ್ಲೂ ಮನ ಮನದಲ್ಲೂ ಭಜನೆ ಎಂಬ ಆಶಯದೊಂದಿಗೆ ಆನೆಗುಡ್ಡೆ ಶ್ರೀ ವಿನಾಯಕ ದೇವಳದಲ್ಲಿ ವಿವಿಧ ಜಿಲ್ಲೆಯ 48 ತಂಡಗಳಿಂದ ರಾಜ್ಯ ಮಟ್ಟದ ಭಕ್ತಿ ಗಾನ ನೃತ್ಯ ಜೋಡಿ ಭಜನಾ ಸ್ಪರ್ಧಾ ಕಮ್ಮಟ ನಡೆಯಲಿದೆ.

ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧಾ ಸಮಿತಿ,ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಕುಂಭಾಸಿ. ಇವರ ಪ್ರಾಯೋಜಕತ್ವದಲ್ಲಿ ನಡೆಯುವ  ಈ ಅಭೂತಪೂರ್ವ ಭಜನಾ ಯಜ್ನಕ್ಕೆ ಭಕ್ತಾದಿಗಳು ಆಗಮಿಸಿ ನಮ್ಮ ಈ ಸನಾತನ ಭಜನೆಯ ಮಹಾ ಸಂಸ್ಕೃತಿಯನ್ನು  ಉಳಿಸಿ ಬೆಳೆಸುವುದರೊಂದಿಗೆ ಪ್ರೋತ್ಸಾಹಿಸಬೇಕಾಗಿ ಅಧ್ಯಕ್ಷರು‌ ಹಾಗೂ ಸರ್ವ ಸದಸ್ಯರು ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧಾ ಸಮಿತಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ,ಕುಂಭಾಸಿಯವರು ವಿನಂತಿಸಿದ್ದಾರೆ

ಈ ಭಜನಾ ಯಜ್ನಕ್ಕೆ ಭಕ್ತಾದಿಗಳಿಂದ ತನು ಮನ ಧನ ಸಹಾಯವನ್ನು ನಿರಿಕ್ಷಿಸಲಾಗಿದ್ದು ಈ ಮಹಾ ಕಾರ್ಯಕ್ಕೆ ಕೈ ಜೋಡಿಸುವವರು ಸೀತರಾಮ ಧನ್ಯ ಗೋಪಾಡಿ (99640 26315) ಇವರನ್ನು ಸಂಪರ್ಕಿಸಲು ಕೋರಲಾಗಿದೆ

   

Related Articles

error: Content is protected !!