Home » ಇಂದು ಆನೆಗುಡ್ಡೆ ಬ್ರಹ್ಮರಥೋತ್ಸವ
 

ಇಂದು ಆನೆಗುಡ್ಡೆ ಬ್ರಹ್ಮರಥೋತ್ಸವ

ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ

by Kundapur Xpress
Spread the love

ಕುಂಭಾಸಿ : ಆನೆಗುಡ್ಡೆ ಶ್ರೀ ವಿನಾಯಕ ದೇವಳದಲ್ಲಿ ಇಂದು ಶ್ರೀ ವಿನಾಯಕ ದೇವರ ಬ್ರಹ್ಮರಥೋತ್ಸವ ಮತ್ತು ಲೋಕ ಕಲ್ಯಾಣರ್ಥವಾಗಿ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಯಾಗ ನಡೆಯಲಿದೆ.

ಬ್ರಹ್ಮರಥೋತ್ಸವ ಅಂಗವಾಗಿ  ಇಂದು  ಪೂರ್ವಾಹ್ನ ಯಂತ್ರೋದ್ವಾರ ಪೂರ್ವಕ ಅಷ್ಟೋತ್ತರ ಸಹಸ್ರ ನಾರಿಕೇಳ ಗಣಯಾಗ ಮತ್ತು ಬ್ರಹ್ಮ ರಥೋತ್ಸವ ಹಾಗೂ ಅನ್ನಸಂತರ್ಪಣೆ, ಭಜಕರಿಂದ ಪಾನಕ ವಿತರಣೆ, ರಾತ್ರಿ ಸುಡುಮದ್ದು ಪ್ರದರ್ಶನ ಶಯನೋತ್ಸವ, ಡಿ.6ರಂದು ಚೂರ್ಣೋತ್ಸವ, ಅವಕೃತ ಸ್ನಾನ, ವಸಂತಾರಾಧನೆ, ಮಂತ್ರಾಕ್ಷತೆ ಪ್ರಸಾದ ವಿತರಣೆಯೊಂದಿಗೆ ಆನೆಗುಡ್ಡೆ ಶ್ರೀ ವಿನಾಯಕ ದೇವರ ಬ್ರಹ್ಮರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.

ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಶುಭಶ್ರೀ ಅಡಿಗ ಹಾಗೂ ಶಿಷ್ಯಯರು ಉಡುಪಿ ಅವರಿಂದ ವೀಣಾನಾದಮೃತ ಹಾಗೂ ಸಾಲಿಗ್ರಾಮ ಸತೀಶ್ ದೇವಾಡಿಗ ತಂಡದವರಿಂದ ಸ್ಯಾಕ್ರೋಫೋನ್ ವಾದನ, ರಾತ್ರಿ 9.30ಕ್ಕೆ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಶಿರಿಯಾರ ಅವರಿಂದ ಪೌರಾಣಿಕ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನ ಗೊಳ್ಳಲಿದೆ ದೇವಳದ ಆನುವಂಶಿಕ ಎಂದು ಆಡಳಿತ ಮೊಕ್ತಸರ ಕೆ. ಶ್ರೀರಮಣ ಉಪಾಧ್ಯಾಯ ತಿಳಿಸಿದ್ದಾರೆ.

 

Related Articles

error: Content is protected !!