Home » ಆನೆಗುಡ್ಡೆಗೆ ವಿದ್ಯಾ ಶಂಕರಾನಂದ ಸರಸ್ವತಿ ಗುರೂಜೀ ಭೇಟಿ
 

ಆನೆಗುಡ್ಡೆಗೆ ವಿದ್ಯಾ ಶಂಕರಾನಂದ ಸರಸ್ವತಿ ಗುರೂಜೀ ಭೇಟಿ

by Kundapur Xpress
Spread the love

ಕುಂದಾಪುರ : ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಕಲರ್ಸ್ ಕನ್ನಡ ವಾಹಿನಿಯ ಮಹರ್ಷಿ ದರ್ಶನ ಖ್ಯಾತಿಯ ವಿದ್ಯಾ ಶಂಕರಾನಂದ ಸರಸ್ವತಿ ಗುರೂಜೀ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ದೇವಳದ ಆಡಳಿತ ಮೊಕ್ತಸರ ಶ್ರೀರಮಣ ಉಪಾಧ್ಯಾಯ ಗುರೂಜೀ ಅವರನ್ನು ಗೌರವಪೂರ್ವಕವಾಗಿ ಬರಮಾಡಿಕೊಂಡು ದೇವರ ಪ್ರಸಾದವನ್ನು ನೀಡಿ ಸನ್ಮಾನಿಸಿದರು

ಈ ಸಂದರ್ಭ ದೇವಸ್ಥಾನದ ಇತಿಹಾಸ, ಪುರಾಣ, ಆಡಳಿತ, ಅಭಿವೃದ್ಧಿ ಕಾರ್ಯಕ್ರಮಗಳ ವ್ಯವಸ್ಥೆಯ ಬಗ್ಗೆ ಸಮಗ್ರ ಮಾಹಿತಿ ಯನ್ನು ಗುರೂಜಿ ಅವರಿಗೆ ನೀಡಲಾಯಿತು.

ದೇವಳದ ವಿಶ್ರಾಂತ ಧರ್ಮದರ್ಶಿಗಳಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಕೆ. ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರು, ದೇವಳದ ಮೊಕ್ತಸರಾದ ಕೆ.ಪದ್ಮನಾಭ ಉಪಾಧ್ಯಾಯ, ಕೆ. ನಿರಂಜನ ಉಪಾಧ್ಯಾಯ, ಅರ್ಚಕ ಮಂಡಳಿ ಸದಸ್ಯರು, ದೇವಳದ ಮೆನೇಜರ್‌ ನಟೇಶ್‌ ಕಾರಂತ್‌ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು

 

Related Articles

error: Content is protected !!