ಅಯೋಧ್ಯೆ : ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲಕ ರಾಮನ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಮೊದಲ ರಾಮನವಮಿ ಇಂದು ಬುಧವಾರ ನಡೆಯುತ್ತಿದ್ದು, ಅಯೋಧ್ಯೆಯಲ್ಲಿ ಸಡಗರ ಕಳೆಗಟ್ಟಿದೆ. 500 ವರ್ಷಗಳ ಬಳಿಕ ಅಯೋಧ್ಯೆಯ ರಾಮನ ಜನ್ಮಸ್ಥಳದಲ್ಲೇ ಅದ್ದೂರಿಯಾಗಿ ರಾಮನವಮಿ ಆಚರಣೆ ನಡೆಯುತ್ತಿದ್ದು, ಐತಿಹಾಸಿಕ ಕ್ಷಣಗಳಿಗೆ ಉತ್ತರ ಪ್ರದೇಶ ಸಾಕ್ಷಿಯಾಗಲಿದೆ.
ಇಂದು ಮುಂಜಾನೆಯೇ ಮಂದಿರ ತೆರೆಯಲಿದೆ. ಬೆಳಗಿನ ಜಾವ 3.30ಕ್ಕೆ ಮಂಗಳಾರತಿ ನೆರವೇರಿಸುವುದರ ಮೂಲಕ ಗರ್ಭಗುಡಿ ಬಾಗಿಲು ತೆರೆಯಲಿದ್ದು, ರಾತ್ರಿ 11 ರ ತನಕವೂ ಬಾಲ ರಾಮ ಭಕ್ತರಿಗೆ ದರ್ಶನವನ್ನು ನೀಡಲಿದ್ದಾನೆ. ರಾಮ ಮಂದಿರ ದಿನ ಬರೋಬ್ಬರಿ 19 ಗಂಟೆಗಳ ಮರ್ಯಾದಾ ಪುರುಷೋತ್ತಮ ಮಂದಿರ ಓಪನ್ ಇರಲಿದೆ