Home » 2ನೇ ದಿನವೂ 3 ಲಕ್ಷ ಭಕ್ತರು
 

2ನೇ ದಿನವೂ 3 ಲಕ್ಷ ಭಕ್ತರು

by Kundapur Xpress
Spread the love

ಅಯೋಧ್ಯೆ: ಸೋಮವಾರ ಪ್ರತಿಷ್ಟಾಪಿಸಲಾದ ಅಯೋಧ್ಯೆ ಶ್ರೀರಾಮನ ವಿಗ್ರಹವನ್ನು ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಿದ 2ನೇ ದಿನವೂ 3 ಲಕ್ಷ ಮಂದಿ ಬಾಲರಾಮನ ದರ್ಶನ ಪಡೆದಿದ್ದಾರೆ. ಮೊದಲ ದಿನ ಉಂಟಾಗಿದ್ದ ನೂಕುನುಗ್ಗಲು ಸಮಸ್ಯೆಯನ್ನು ಪರಿಹರಿಸಿರುವ ಸ್ಥಳೀಯ ಆಡಳಿತ ಉತ್ತಮ ಸರತಿ ಸಾಲುಗಳ ವ್ಯವಸ್ಥೆಯನ್ನು ರೂಪಿಸಿದೆ.

2ನೇ ದಿನ್ನ 3 ಲಕ್ಷ ಮಂದಿ ರಾಮನ ದರ್ಶನ ಪಡೆದಿದ್ದಾರೆ. ಮೊದಲ ದಿನ ಒಟ್ಟಾರೆ 5 ಲಕ್ಷ ಜನರು ದೇಗುಲಕ್ಕೆ ಆಗಮಿಸಿದ್ದರು. ಜೊತೆಗೆ ಮೊದಲ ದಿನ 3.17 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಪ್ರಾಣಪ್ರತಿಷ್ಠಾಪನೆ ಇದ್ದ ಕಾರಣ ಮಂದಿರಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿತ್ತು.

ಮಧ್ಯಾಹ್ನದ ವಿರಾಮ ಕಡಿತ : ರಾಮಮಂದಿರದಲ್ಲಿ ನೈವೇದ್ಯದ ಬಳಿಕ ಮಧ್ಯಾಹ್ನ 2 ಗಂಟೆಗಳ ಬಿಡುವನ್ನು ಘೋಷಿಸಲಾಗಿತ್ತು. ಆದರೆ ದೇವಸ್ಥಾನದ ಬಳಿ ನೆರೆದಿರುವ ಭಕ್ತರಿಗೆ ದರ್ಶನ ಒದಗಿಸುವ ನಿಟ್ಟಿನಲ್ಲಿ ಈ ವಿರಾಮದ. ಸಮಯವನ್ನು 1 ಗಂಟೆಗೆ ಕಡಿತಗೊಳಿಸಲಾಗಿದೆ.

ಇದೇ ಸಂದರ್ಭದಲ್ಲಿ: ರಾಮನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ಮುನ್ನಚರಿಕೆ ಕ್ರಮವನ್ನು ಅನುಸರಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೂಚಿಸಿದ್ದಾರೆ

9

   

Related Articles

error: Content is protected !!