ಕುಂದಾಪುರ : ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಿಯ ಬ್ರಹ್ಮ ರಥೋತ್ಸವವು ವಿವಿಧ ಧಾರ್ಮಿಕ ವಿಧಿವಿ ಧಾನಗಳೊಂದಿಗೆ ನಾಳೆ ಎಪ್ರಿಲ್.23 ರಂದು ನಡೆಯಲಿದೆ.
ಬೆಳಗ್ಗೆ 10 ಕ್ಕೆ ಮಹಿಳೆಯರಿಂದ ಸಾಮೂಹಿಕ ಕುಂಕಮಾರ್ಚನೆ ಹಾಗೂ ಮಹಾ ಅನ್ನಸಂತರ್ಪಣೆ ಜರುಗಲಿದೆ. ಸಂಜೆ ಗಂಟೆ 6.00 ರಿಂದ ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಸಾರಥ್ಯದಲ್ಲಿ ಟೀಮ್ ಮತ್ತ್ವಗಂಧ ಅವರಿಂದ ‘ಶ್ರೀರಾಮ ದರ್ಶನಂ’ ಯಕ್ಷಗಾನ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ
ಏ.24ರಂದು ಸಂಜೆ 6.00 ರಿಂದ ಕುಣಿತ ಭಜನೆ, ಸಂಜೆ 7 ರಿಂದ ಬಗ್ವಾಡಿ ಫ್ರೆಂಡ್ಸ್ ಪ್ರಾಯೋಜಕತ್ವದಲ್ಲಿ 14ನೇ ವರ್ಷದ ಸಾಂಸ್ಕೃತಿಕ ಉತ್ಸವ ಕಲರವ-2024 ಜರುಗಲಿದೆ. ನೃತ್ಯವೈಭವ, ಸಂಗೀತ ರಸ ಸಂಜೆ ನಡೆಯಲಿದೆ. ಏ.25 ರಂದು ಶ್ರೀ ದೇವಿಯ ತೆಪ್ಪೋತ್ಸವ ಸೇವೆ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಲಿದೆ