ಕೋಟ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಚೇಂಪಿಯಲ್ಲಿ ಇಂದು ಶುಕ್ರವಾರ ಕ್ರೋಧಿನಾಮ ಸಂವತ್ಸರದ ಪುಷ್ಯ ಶುದ್ಧ ಏಕಾದಶಿಯಂದು ತಿರುಪತಿ ದೇವರ ಪ್ರತಿರೂಪವಾದ ಶ್ರೀ ಲಕ್ಷ್ಮೀ ವೆಂಕಟರಮಣ ದರ್ಶನವನ್ನು ಸಪ್ತದ್ವಾರದ ಮೂಲಕ ಉತ್ತರ ದ್ವಾರದಿಂದಲೇ ನೋಡುವ ಸೌಭಾಗ್ಯವನ್ನು ಕಲ್ಪಿಸುವ ಮೂಲಕ ವೈಕುಂಠ ಏಕಾದಶಿ ಮಹೋತ್ಸವ ವಿಶೇಷ ಆಚರಣೆಯನ್ನು ಏರ್ಪಡಿಸಲಾಗಿದೆ. ಈ ದಿನ ಪ್ರಖ್ಯಾತ ಭಜನಾ ಮಂಡಳಿಯವರಿಂದ ಪ್ರಾತಃಕಾಲದಿಂದ ರಾತ್ರಿ ಪೂಜೆಯವರೆಗೆ ಭಜನ ಸಂಕೀರ್ತನೆ ನಡೆಯಲಿದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ