ಕುಂದಾಪುರ:ನಗರದ ಪಡುಕೇರಿಯಲ್ಲಿರುವ ಚಿಕ್ಕಮ್ಮ ದೇವಸ್ಥಾನವು ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದ್ದು ಎರಡನೇ ದಿನದ ಧಾರ್ಮಿಕ ಕಾರ್ಯಕ್ರಮಗಳು ಪುರೋಹಿತರಾದ ವಿಶ್ವನಾಥ ಉಪಾಧ್ಯಾಯ ಹಾಗೂ ರವೀಶ್ ಹೊಳ್ಳರವರ ನೇತೃತ್ವದಲ್ಲಿ ನಡೆಯಿತು
ಬೆಳಿಗ್ಗೆ ಗುರುಗಣಪತಿ ಪ್ರಾರ್ಥನೆಯೊಂದಿಗೆ ಪುಣ್ಯಾಹವಾಚನ ಶ್ರೀದೇವಿ ಪರಿವಾರ ದೈವಗಳ ಸನ್ನಿಧಿಯಲ್ಲಿ ಪಂಚವಿಂಶತಿ ಕಲಶ ಸ್ಥಾಪನೆ ಪ್ರಧಾನ ಅಧಿವಾಸ ಹೋಮ ಕಲಶಾಭಿಷೇಕ ದೊಂದಿಗೆ ಚಂಡಿಕಾಹೋಮ ಸಂಪನ್ನಗೊಂಡಿತು ಮಧ್ಯಾಹ್ನ ಮಹಾಪೂಜೆಯೊಂದಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು
ಸಂಜೆ ಚಿನ್ನದ ಮುಖವಾಡವನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಪುರಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರಲಾಯಿತು ಪುರಮೆರವಣಿಗೆಯಲ್ಲಿ ಚಂಡೆ ವಾದ್ಯಗಳು ಮೇಳೈಸಿದವು ನಂತರ ವಿವಿಧ ಭಜನಾ ತಂಡಗಳಿಂದ ಅಖಂಡ ಭಜನೆ ನೆರವೇರಿತು