Home » ಕುಣಿತದ ಭಜನೆ ಅಭ್ಯಾಸ ಮಹತ್ವಪೂರ್ಣ
 

ಕುಣಿತದ ಭಜನೆ ಅಭ್ಯಾಸ ಮಹತ್ವಪೂರ್ಣ

ರಂಗನಾಥ ಭಟ್

by Kundapur Xpress
Spread the love

ಉಡುಪಿ : ದೇವಸ್ಥಾನದ ಒಳಗೆ ದೇವರಿಗೆ ಪೂಜೆ ನಡೆದರೆ, ದೇವರ ಸಾನಿಧ್ಯದಲ್ಲಿ ನೂರಾರು ಭಜಕರರು ದೇವರಿಗೆ ಪ್ರಿಯವಾದ ಸಂಕೀರ್ತನೆಯೊಂದಿಗೆ ಕುಣಿತದ ಭಜನೆಯಲ್ಲಿ ತೊಡಗಿರುವುದು ಶ್ಲಾಘನೀಯ. ಭಕ್ತಿ ಮಾರ್ಗದ ಜೊತೆಗೆ ದೈಹಿಕ ಮಾನಸಿಕ ಅರೋಗ್ಯಕ್ಕೂ ಪೂರಕವಾಗಿರುವ ಕುಣಿತದ ಭಜನಾ ಅಭ್ಯಾಸ ಅತ್ಯಂತ ಮಹತ್ವಪೂರ್ಣ ಎಂದು ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ರಂಗನಾಥ ಭಟ್ ಅವರು ಹೇಳಿದರು.

ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ವತಿಯಿಂದ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಹಿರಿಯಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ.) ಉಡುಪಿ ತಾಲೂಕು ಹಾಗೂ ಎಸ್.ವಿ.ಟಿ. ಕರಸೇವಕರು ಹಿರಿಯಡ್ಕ ಇವರ ಜಂಟಿ ಸಹಯೋಗದಲ್ಲಿ ಹಿರಿಯಡ್ಕ ದೇವಳದ ಸಭಾಂಗಣದಲ್ಲಿ ನೊಂದಾಯಿತ ಶಿಬಿರಾರ್ಥಿಗಳಿಗೆ ಜು.28ರಿಂದ ಆ.25ರ ವರೆಗೆ ಪ್ರತೀ ರವಿವಾರ ನಡೆಯುವ 5 ದಿನಗಳ ‘ಉಚಿತ ಕುಣಿತದ ಭಜನಾ ತರಬೇತಿ ಶಿಬಿರ’ವನ್ನು ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಶುಭ ಹಾರೈಸಿದರು

ಭಜನಾ ಪರಿಷತ್ತಿನ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಮಾತನಾಡಿ, ಹಿರಿಯಡ್ಕದಲ್ಲಿ ಪ್ರಥಮ ಬಾರಿಗೆ 300ಕ್ಕೂ ಹೆಚ್ಚು ಭಜನಾಸಕ್ತರನ್ನು ಒಗ್ಗೂಡಿಸಿ ಮಾದರಿಯಾಗಿ ಕುಣಿತದ ಭಾಜನಾ ತರಬೇತಿಯನ್ನು ಹಮ್ಮಿಕೊಂಡಿರುವ ಉಡುಪಿ ತಾಲೂಕು ಭಜನಾ ಪರಿಷತ್ತಿನ ಸತ್ಕಾರ್ಯ ಪ್ರಶಂಸನೀಯ. ನೊಂದಾಯಿತ ಭಜಕರು ಎಲ್ಲ 5 ದಿನಗಳ ತರಗತಿಯಲ್ಲಿ ತಪ್ಪದೇ ಭಾಗವಹಿಸಿ, ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಮಾತನಾಡಿ, ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ನುರಿತ ತರಬೇತುದಾರರಿಂದ 5 ದಿನಗಳಲ್ಲಿ ಏಕ ಕಾಲದಲ್ಲಿ ನಡೆಯುವ ಕುಣಿತದ ಭಜನಾ ತರಬೇತಿಯಲ್ಲಿ ತಾಳ ಹಾಗೂ ಸಾಂಪ್ರದಾಯಿಕ ಉಡುಗೆಯೊಂದಿಗೆ ಭಾಗವಹಿಸಿದ 300ಕ್ಕೂ ಮಿಕ್ಕಿದ ಬಾಲಕ-ಬಾಲಕಿಯರು, ಯುವಕ-ಯುವತಿಯರು ಮತ್ತು ಮಹಿಳಾ ಶಿಭಿರಾರ್ಥಿಗಳಿಗೆ ಆ.25ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ವತಿಯಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್., ಶ್ರೀ ವೀರಭದ್ರ ದೇವಸ್ಥಾನದ ಕರ ಸೇವಕರ ಪ್ರಮುಖ ಶ್ರೀನಿವಾಸ ರಾವ್ ಹಿರಿಯಡ್ಕ, ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಮುದ್ರಾಡಿ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸತ್ಯಾನಂದ ನಾಯಕ್ ಆತ್ರಾಡಿ, ತಾಲೂಕು ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಕೋಶಾಧಿಕಾರಿ ಹಾಗೂ ತರಬೇತುದಾರೆ ಪೂರ್ಣಿಮಾ ಪೆರ್ಡೂರು, ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪೇತ್ರಿ, ತರಬೇತಿ ಕಾರ್ಯಾಗಾರದ ಗೌರವ ಸಲಹೆಗಾರ ನಟರಾಜ್ ಹೆಗ್ಡೆ ಹಿರಿಯಡ್ಕ, ಯೋಜನೆಯ ಹಿರಿಯಡ್ಕ ವಲಯ ಮೇಲ್ವಿಚಾರಕ ಸಂತೋಷ್, ಒಕ್ಕೂಟದ ಹಿರಿಯಡ್ಕ ವಲಯಾದ್ಯಕ್ಷ ಗಣೇಶ್ ನಾಯಕ್, ತರಬೇತುದಾರರಾದ ಪ್ರಕಾಶ್ ಮಂದಾರ್ತಿ, ನಿತ್ಯಾನಂದ್ ಕಬ್ಯಾಡಿ, ರೋಹಿತ್ ಕಬ್ಯಾಡಿ, ತಾಲೂಕು ಜನಜಾಗೃತಿ ವೇದಿಕೆಯ ಸಮಿತಿ ಸದಸ್ಯೆ ನಳಿನಾದೇವಿ ಎಮ್.ಆರ್., ಪ್ರಮುಖರಾದ ನಿತೀಶ್ ಕುಮಾರ್ ಶೆಟ್ಟಿ ಕೊಂಡಾಡಿ, ಮಾಣೈ ಮುಖ್ಯಪ್ರಾಣ ಮಠದ ವಿನೋದ ಶೆಡ್ತಿ, ಪ್ರಭಾಕರ ಶೆಟ್ಟಿ ಪ್ರಭಾವನ ಕಬ್ಯಾಡಿ, ಸುಭಾಶ್ ಶೆಟ್ಟಿ ಕೈರಾಳಿ, ರಾಮ ನಾಯ್ಕ್ ಪೆರ್ಣಂಕಿಲ, ದಿನೇಶ್ ಪೂಜಾರಿ ಮೂಡು ಅಂಜಾರು, ಸುಂದರ್ ಅಂಜಾರು ಬಜೆ, ಉದ್ಯಮಿ ಉಮೇಶ್ ಶೆಟ್ಟಿ, ಗೋಪಾಲ್ ಸೇರಿಗಾರ್, ಶಂಕರ ಆಚಾರ್ಯ, ಗೋಕುಲ್ ದಾಸ್ ನಾಯಕ್, ರಮೇಶ್ ದೇವಾಡಿಗ, ಚೇತನ್ ಪೆರ್ಡೂರು, ವಿವಿಧ ಭಜನಾ ಮಂಡಳಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮತ್ತು ಒಕ್ಕೂಟದ ಪದಾಧಿಕಾರಿಗಳು ಹಾಗೂ ಶ್ರೀ ವೀರಭದ್ರ ದೇವಸ್ಥಾನದ ಕರ ಸೇವಕರು, ಭಜನಾಸಕ್ತರು ಉಪಸ್ಥಿತರಿದ್ದರು.

   

Related Articles

error: Content is protected !!