ಅಯೋಧ್ಯೆ : ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಅಯೋಧ್ಯೆಯ ಪ್ರಭು ಶ್ರೀ ರಾಮಚಂದ್ರ ದೇವರಿಗೆ 48 ದಿನಗಳ ಕಾಲ ಮಂಡಲೋತ್ಸವ ಹಾಗೂ ಕಲಶ ಸೇವೆ ನಡೆಯುತ್ತಿದ್ದು ಅಯೋಧ್ಯೆಯ ಶ್ರೀರಾಮ ದೇವರ ಮಂಡಲೋತ್ಸವಕ್ಕೆ ಶ್ರೀರಾಮ ದೇವರಿಗೆ
ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಹಾಗೂ ಅವರ ಕುಟುಂಬದ ವತಿಯಿಂದ ರಜತ ಕಲಶ ಸೇವೆಯನ್ನು ನೀಡಲಾಯಿತು. ಬಳಿಕ ನಡೆದ ಅಯೋಧ್ಯೆ ಶ್ರೀ ರಾಮ ದೇವರ ತೊಟ್ಟಿಲು ಉತ್ಸವದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗಿಯಾದರು.