104
ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಶ್ರೀ ಕೃಷ್ಣ ಮಠದಲ್ಲಿ ಮುಂಬರುವ ಕೃಷ್ಣ ಜನ್ಮಾಷ್ಟಮಿಯನ್ನು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ವೈಶಿಷ್ಟ್ಯ ಪೂರ್ಣವಾಗಿ ನಡೆಸುವ ಬಗ್ಗೆ ಪ್ರಥಮ ಚಿಂತನಾ ಸಭೆ ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ನಡೆಯಿತು.
ಆಗಸ್ಟ್ 01 ರಿಂದ ಮೊದಲ್ಗೊಂಡು ಸೆಪ್ಟೆಂಬರ್ 13 ರವರೆಗೆ ಈ ಮಂಡಲೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಚಾ೦ದ್ರ ಕೃಷ್ಣ ಜನ್ಮಾಷ್ಟಮಿ ಆಗಸ್ಟ್ 15,16 ಮತ್ತು ಸೌರ ಶ್ರೀ ಕೃಷ್ಣ ಜನ್ಮಾಷ್ಟಮಿ ಸೆಪ್ಟೆಂಬರ್ 14,15 ರಂದು ನಡೆಯಲಿದೆ.
ಉಡುಪಿಯಲ್ಲಿ ಸೌರ ಮಾನ ಪದ್ಧತಿ ಆಚರಣೆಯಲ್ಲಿದ್ದು ಈ ಎರಡೂ ಉತ್ಸವಗಳನ್ನು ವೈಭವದಿಂದ ಆಚರಿಸಲು ಚರ್ಚಿಸಲಾಯಿತು.

