ಕೋಟ : ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವತಿಯಿಂದ ಶ್ರೀ ಭಗವತೀ ಅಮ್ಮನವರ ದೇವಸ್ಥಾನ ಗುಂಡ್ಮಿ ಇಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಪ್ರತೀದಿನ ನಡೆಯುತ್ತಿರುವ ಶ್ರೀ ಲಲಿತಾ ಸಹಸ್ರ ನಾಮ ಪಾರಾಯಣ ಮಹಾನವಮಿಯ ದಿನದಂದು ಸಂಪನ್ನ ಗೊಂಡಿತು.
ಶರನ್ನವರಾತ್ರಿಯ ಪ್ರಯುಕ್ತ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ಮಹಿಳಾ ಬಳಗದವರಿಂದ ಶ್ರೀ ಭಗವತೀ ಅಮ್ಮನವರ ದೇವಸ್ಥಾನ ಗುಂಡ್ಮಿ ಇಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ನಡೆಯುತ್ತಿರುವ ಒಂಭತ್ತು ದಿನಗಳ ಕಾಲ ನಡೆಯುತ್ತಿರುವ ಶ್ರೀ ಲಲಿತಾ ಸಹಸ್ರ ನಾಮ ಪಾರಾಯಣಕ್ಕೆ ಶುಕ್ರವಾರ ಮಂಗಳ ಹಾಡಲಾಯಿತು.
ಶ್ರೀ ದೇವಳದ ಆಡಳಿತದ ಪರವಾಗಿ ಜಿ. ಶಿವಾನಂದ ಮೈಯ್ಯ ಪಾರಾಯಣದಲ್ಲಿ ಪಾಲ್ಗೊಂಡ ಎಲ್ಲಾ ಮಹಿಳಾ ಬಳಗದವರಿಗೆ ಕೃತಜ್ಞತೆ ಸಲ್ಲಿಸಿದರು. ಸಭಾದ ಅಧ್ಯಕ್ಷ ಯಂ ಶಿವರಾಮ ಉಡುಪ ಅವರು ದೇವಳದ ಆಡಳಿತ, ಅರ್ಚಕರು, ಸೇವೆಯ ಸತಿ9ಯವರು, ಹಾಗೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿರಂತರವಾಗಿ ಪಾರಾಯಯಣದಲ್ಲಿ ಭಾಗವಹಿಸಿದ ಸಭಾದ ಎಲ್ಲಾ ಮಹಿಳಾ ಬಳಗದವರಿಗೆ ಕೃತಜ್ಞತೆ ಸಲ್ಲಿಸಿದರು.
ಶ್ರೀ ದೇವಳದ ಆಡಳಿತದ ಪರವಾಗಿ ಶಿವಾನಂದ ಮೈಯ್ಯ, ಉದಯ ಕುಮಾರ್ ಮೈಯ್ಯ, ಜಿ. ರಾಮಚಂದ್ರ ಐತಾಳ, ಸತಿಯವರಾದ ಕಾಶೀಶ್ವರ ಮೈಯ್ಯ, ಅರ್ಚಕರಾದ ವೇದಮೂರ್ತಿ ರಾಮದಾಸ ಅಡಿಗ ಸಭಾದ ಉಪಾಧ್ಯಕ್ಷ ಪಟ್ಟಾಭಿರಾಮ ಸೋಮಯಾಜಿ ಮತ್ತಿತರರು ಉಪಸ್ಥಿತರಿದ್ದರು. ನಿರಂತರ ಪಾರಾಯಣದ ನೇತೃತ್ವ ವಹಿಸಿದ ಶ್ರೀ ಮಹಾಗಣಪತಿ ಭಜನಾ ಮಂಡಳಿ ಕಾರ್ಕಡ ಇದರ ಮುಖ್ಯಸ್ಥರಾದ ಸುಕನ್ಯಾ ಸೋಮಯಾಜಿ ಉಪಸ್ಥಿತರಿದ್ದರು.ಸಭಾದ ಕಾರ್ಯದರ್ಶಿ ಕೆ.ರಾಜಾರಾಮ ಐತಾಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.