Home » ನಾಳೆ ಸಾಲಿಗ್ರಾಮ ಗುರುನರಸಿಂಹ ಹಾಗೂ ಆಂಜನೇಯ ದೇವರ ಬ್ರಹ್ಮರಥೋತ್ಸವ
 

ನಾಳೆ ಸಾಲಿಗ್ರಾಮ ಗುರುನರಸಿಂಹ ಹಾಗೂ ಆಂಜನೇಯ ದೇವರ ಬ್ರಹ್ಮರಥೋತ್ಸವ

by Kundapur Xpress
Spread the love

ಕೋಟ : ಸಾಲಿಗ್ರಾಮ ಗುರುನರಸಿಂಹ ಹಾಗೂ ಆಂಜನೇಯ ದೇವರ ಬ್ರಹ್ಮರಥೋತ್ಸವವು ನಾಳೆ  ಜ.16ರಂದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ. ಸಂಭ್ರಮದಿಂದ ಜರುಗಲಿದೆ

ದಿನಾಂಕ ಜನವರಿ 10 ರಿಂದ ನಾನಾ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಮಂಗಳವಾರ ಮಕರ ಸಂಕ್ರಮಣ ಬೆಳಗ್ಗೆ ನರಸಿಂಹ ಹೋಮ, ಗಣಹೋಮ, ಮಹಾಪೂಜೆ, ರಜತ ರಥೋತ್ಸವ, ಸಾಯಂಕಾಲ ಧ್ವಜಾ ರೋಹಣ, ಕಿರಿ ರಂಗ ಪೂಜೆ, ಉತ್ಸವ ಬಲಿ ಜರುಗಿತು.

ಜ.15ರಂದು ಬೆಳಗ್ಗೆ ಸಂಹಿತಾ ಪಾರಾಯಣ, ಉತ್ಸವಾದಿ ಕಾರ್ಯ ಕ್ರಮ, ಸಂಜೆ ಸುತ್ತು ಸೇವೆ, ರಜತ ಪಲ್ಲಕಿ ಉತ್ಸವ, ಪುರಮೆರವಣಿಗೆ, ಪುಷ್ಪ ರಥೋತ್ಸವ ನಡೆಯಲಿದೆ. ಜ.16ರಂದು ಉತ್ಸವಾದಿ ಕಾರ್ಯಕ್ರಮಗಳು, ಬೆಳಗ್ಗೆ 10.30 ರ ಕುಂಭ ಲಗ್ನದಲ್ಲಿ ರಥಾರೋಹಣ, ಸಂಜೆ 6.00ಕ್ಕೆ ರಥಾವರೋಹಣ ನಡೆಯಲಿದೆ.

ಜ.17 ರಂದು ಬೆಳಗ್ಗೆ 8ಕ್ಕೆ ಪ್ರಬೋಧೋತ್ಸವ, ಸಂಜೆ ಓಕುಳಿ ಸೇವೆ ಜರುಗಲಿದೆ. ದಿ.18 ರಂದು ಸಂಪ್ರೋಕ್ಷಣೆ, ಗಣಹೋಮ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ.

ಜ.13ರಿಂದ 19ವರೆಗೆ ಪ್ರತಿ ನಿತ್ಯ ಸಂಜೆ ಶ್ರೀ ಗುರುನರಸಿಂಹ ದೇವರ ಬಯಲು ರಂಗ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.ಜ.15ರಂದು ಸಂಜೆ 6ಕ್ಕೆ ದೇವಳದ ಬಯಲುರಂಗ ಮಂಟಪದಲ್ಲಿ ನಡೆಯುವ ಧಾರ್ಮಿಕ ಮತ್ತು ಸನ್ಮಾನ ಸಮಾರಂಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಣಿಪಾಲ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಂ.ಡಿ.ವೆಂಕಟೇಶ್ ಆಗಮಿಸಲಿದ್ದಾರೆ. ನಾನಾ ಕ್ಷೇತ್ರದ ಸಾಧಕರಾದ ಡಾ.ಆನಂದರಾಮ ಉಪಾಧ್ಯ ಚಿತ್ರಪಾಡಿ, ಕೃಷ್ಣವೇಣಿ ತುಂಗ, ಎ. ವಾಸುದೇವ ಹೊಳ್ಳ, ವೇದಮೂರ್ತಿ ಕೃಷ್ಣ ಎಂ.ಜೋಗ ಭಟ್ಟ, ಅದ್ದೂರು ವೆಂಕಟರಾವ್, ಕಿರಣ್ ಮಯ್ಯ ಎಂ.ಎಸ್ ಅಮೆರಿಕ, ಕ್ಯಾ.ನೇಹ ಜಯರಾಮ್ ಐತಾಳ್, ಬಾಬುರಾಯ ಆಚಾರ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಕೆ.ಎಸ್. ಕಾರಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಜಾತ್ರೆ : ಪ್ರಕಟಣೆ

ಸಾಲಿಗ್ರಾಮ ಪಟ್ಟಣ ಪಂಚಾಯಿತಿ  ವ್ಯಾಪ್ತಿಯಲ್ಲಿ ಶ್ರೀ ಗುರುನರಸಿಂಹ ದೇವರ ಮತ್ತು ಶ್ರೀ ಆಂಜನೇಯ ದೇವರ ಜಾತ್ರಾ ಮಹೋತ್ಸವವು ಜ.16 ರಿಂದ 18ರ ವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಜಾತ್ರೆಗೆ ಆಗಮಿಸುವ ಭಕ್ತಾದಿಗಳು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ, ಮಾರಾಟ, ಸಂಗ್ರಹಣೆ, ಸಾಗಾಣಿಕೆ ಹಾಗೂ ಸರಬರಾಜು ಮಾಡದೇ, ಪ್ಲಾಸ್ಟಿಕ್ ಚೀಲ ಬದಲು ಬಟ್ಟೆಚೀಲ, ಪೇಪರ್ ಚೀಲ, ಸೆಣಬಿನ ಚೀಲ ಅಥವಾ ಬೀಣಿ ಚೀಲ ಬಳಸಿ ಜಾತ್ರೆಯನ್ನು ಪ್ಲಾಸ್ಟಿಕ್ ಮುಕ್ತ ಜಾತ್ರೆ ಯನ್ನಾಗಿಸಲು ಸಹಕರಿಸುವಂತೆ ಹಾಗೂ ತಪ್ಪಿದ್ದಲ್ಲಿ ಸರಕಾರದ ಆದೇಶದಂತೆ ನಿಗಧಿತ ದಂಡ ಶುಲ್ಕ ವಿಧಿಸಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಪ್ರಕಟಣೆ ತಿಳಿಸಿದೆ.

 

Related Articles

error: Content is protected !!