ಬ್ರಹ್ಮಕಲಶೋತ್ಸವ ವೈಭವದ ಹಸಿರುವಾಣಿ
ಕುಂದಾಪುರ: ಶ್ರೀ ಮೈಲಾರೇಶ್ವರ ದೇವಸ್ಧಾನದ ಬ್ರಹ್ಮಕಲಶೋತ್ಸವ ನಿಮಿತ್ತ ನಡೆದ ಹೊರೆಕಾಣಿಕೆಯ ಪುರಮೆರವಣಿಗೆಯ ಚಿಕ್ಕನ ಸಾಲ್ ರಸ್ತೆಯ ಮೈಲಾರೇಶ್ವರ ದೇವಸ್ಧಾನದಿಂದ ಹೊರಡಿತು
ದೇವಸ್ಥಾನದ ಅರ್ಚಕ ಬಾಲಚಂದ್ರ ಭಟ್ ಪೂಜಾ ವಿಧಿವಿಧಾನದ ಮೂಲಕ ಹಸಿರುವಾಣಿಗೆ ಚಾಲನೆ ನೀಡಿದರು
ಕುಂದಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ಹೊರಟ ಪುರಮೆರವಣಿಗೆಯಲ್ಲಿ ಕೊಂಬು ಕಹಳೆಗಳ ಸದ್ದಿನೊಂದಿಗೆ ಹಲವು ಸಂಘ ಸಂಸ್ಥೆಗಳ ಭಜನಾ ತಂಡಗಳಿಂದ ನೃತ್ಯ ಭಜನೆ ಚಂದೆವಾದನ ತಟ್ಟಿರಾಯ ಹಾಗೂ ಗೊಂಬೆ ನರ್ತನ ಹಸಿರುವಾಣಿಗೆ ಮೆರಗು ನೀಡಿತು
ವಿಶೇಷ ಆಕರ್ಷಣೆಯಾಗಿ ಕಾಂತಾರ ಚಿತ್ರದಲ್ಲಿ ನಟಿಸಿದ ಉಳ್ಳೂರಿನ ಹೆಗ್ಡೆ ಮನೆಯವರ ಕೋಣಗಳು ಶ್ರಂಗಾರದೊಂದಿಗೆ ಆಗಮಿಸಿತ್ತು
ಹಸಿರುವಾಣಿಯು ಮುಖ್ಯರಸ್ತೆಯಲ್ಲಿ ಸಾಗಿ ಮೈಲಾರೇಶ್ವರ ದೇವಸ್ಧಾನದಲ್ಲಿ ಸಂಪನ್ನಗೊಂಡಿತು.
ಶ್ರೀ ಮೈಲಾರೇಶ್ವರ ದೇವಸ್ಧಾನದ ವ್ಯವಸ್ಧಾಪನ ಸಮಿತಿಯ ಅಧ್ಯಕ್ಷರಾದ ರಮೇಶ ಬಿಲ್ಲವ ಹಾಗೂ ಸದಸ್ಯರಾದ ಭಾಸ್ಕರ್ ಗಾಣಿಗ ಹಾಗೂ ಸದಸ್ಯರು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಅಶೋಕ ಬೆಟ್ಟಿನ್ ಪ್ರಧಾನ ಕಾರ್ಯದರ್ಶಿಯಾದ ಕೆ.ಸೂರ್ಯಕಾಂತ ಕಾರ್ಯದರ್ಶಿಗಳಾದ ಕೆ.ಪಿ. ಅರುಣ್ ಹಾಗೂ ಗಣೇಶ ಸಿ ಎಚ್ ಹಾಗೂ ಸಮಿತಿಯ ಸರ್ವ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಿದರು
ಹಸಿರುವಾಣಿ ಪುರಮೆರವಣಿಗೆ ಸಮಿತಿಯ ಅಧ್ಯಕ್ಷರಾದ ಕೆ.ಜಿ.ಸಚ್ಚಿದಾನಂದ ಹಾಗೂ ಹೊರೆಕಾಣಿಕೆ ಸಮಿತಿಯ ಅಧ್ಯಕ್ಷರಾದ ಕೆ.ಪಿ.ಸುಧೀರ್ ರವರು ಅಗತ್ಯ ಸಲಹೆ ಸೂಚನೆ ನೀಡಿ ಪುರಮೆರವಣಿಗೆಯ ಯಶಸ್ಸಿಗಾಗಿ ಶ್ರಮಿಸಿದರು
ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸುರೇಶ್ ಬೆಟ್ಟಿನ್,ಕುಂದೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರರಾದ ಕೆ ಆರ್ ಉಮೇಶ್ ರಾವ್ ಪುರಸಭಾ ಸದಸ್ಯ ಸಂತೋಷ್ ಶೆಟ್ಟಿ,ದೇವಕಿ ಸಣ್ಣಯ್ಯ ರಾಮಕ್ಷತ್ರಿಯರ ಸಂಘದ ಅಧ್ಯಕ್ಷರಾದ ಡಿ ಕೆ ಪ್ರಭಾಕರ್ ರಾಮಕ್ಷತ್ರಿಯ ಯುವಕ ಮಂಡಳಿಯ ಅಧ್ಯಕ್ಷರಾದ ಮಹೇಶ್ ಬೆಟ್ಟಿನ್