ಗಂಗೊಳ್ಳಿ : ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಜೀರ್ಣೋದ್ದಾರ ಪುನ: ಪ್ರತಿಷ್ಠಾ ರಜತ ಮಹೋತ್ಸವ – 2024 ಮತ್ತು ಸಹಸ್ರಾಧಿಕ ಅಷ್ಟೋತ್ತರ ಶತ (1008) ಸುವರ್ಣ ಸಹಿತ ರಜತ ಕಲಶಾಭಿಷೇಕ ಮಹಾ ಸೇವಾ ಕಾರ್ಯಕ್ರಮದ ಅಂಗವಾಗಿ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ಡಿ.15ರಂದು ನಡೆಯಲಿದೆ.
ಅಂದು ಮಧ್ಯಾಹ್ನ 3 ಗಂಟೆಗೆ ಉಡುಪಿಯಿಂದ ಹೊರೆಕಾಣಿಕೆ ಶೋಭಾಯಾತ್ರೆ ಆರಂಭಗೊಂಡು ಸಂತೆಕಟ್ಟೆ ಬ್ರಹ್ಮಾವರ, ಸಾಸ್ತಾನ, ಚೇಂಪಿ, ಸಾಲಿಗ್ರಾಮ ಕುಂದಾಪುರ ಮಾರ್ಗವಾಗಿ ಸಂಜೆ 6 ಗಂಟೆಗೆ ದೇವಳ ತಲುಪಲಿದೆ. ಹೊರೆಕಾಣಿಕೆ ಸಮರ್ಪಣೆ ಮಾಡಲಿಚ್ಛಿಸುವ ಸಮಾಜಬಾಂಧವರು ಆಯಾ ಗ್ರಾಮದ ಸಮಾಜದ ಪ್ರಮುಖರನ್ನು ಸಂಪರ್ಕಿಸಬಹುದು ಅಥವಾ ನೇರವಾಗಿ ಹೊರೆಕಾಣಿಕೆಯನ್ನು ದೇವಸ್ಥಾನಕ್ಕೆ ತಂದು ಒಪ್ಪಿಸಬಹುದು. ಮಾಹಿತಿಗೆ (9008515307), ಟಿ.ಅಜಿತ್ ಪೈ ಉಡುಪಿ (9845240996) ಅವರನ್ನು ಸಂಪರ್ಕಿಸಬಹುದು ಎಂದು ದೇವಸ್ಥಾನದ ಧರ್ಮದರ್ಶಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.