ಕುಂದಾಪುರ :ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಮಹೋತ್ಸವದ ಪ್ರಯಕ್ತ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾ ಗಣಯಾಗ ಹಾಗೂ ಎರಡನೇ ದಿನ ಸತ್ಯ ಗಣಪತಿ ವೃತ ನಡೆಯಿತು
ಸಹಸ್ರಾರು ಭಕ್ತರು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಿನಾಯಕನ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಸಂಪ್ರೀತರಾದರು ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಮುಖ ಗಣ್ಯರನ್ನು ದೇವಸ್ಥಾನದ ಧರ್ಮದರ್ಶಿಗಳಾದ ವೆ.ಮೂ.ಬಾಲಚಂದ್ರ ಭಟ್ಟರು ದೇವಸ್ಥಾನದ ವತಿಯಿಂದ ಗೌರವಿಸಿದರು
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಮೇಶನಾಥ್ ಮತ್ತು ಬಳಗ ಮಂಗಳೂರು ಅವರಿಂದ ವಿಶೇಷ ವಾದ್ಯಗೋಷ್ಠಿ ನಡೆಯಿತು ನಂತರ ಉಡುಪಿಯ ಅಮ್ಮುಂಜೆಯ ಶ್ರೀ ಭ್ರಾಹ್ಮರಿ ನಾಟ್ಯಾಲಯ ಅವರಿಂದ ಭರತನಾಟ್ಯ ಮತ್ತು ನೃತ್ಯ ರೂಪಕ ನಡೆಯಿತು ಸಪ್ಟೆಂಬರ್ 19 ರಂದು ಸಂಜೆ 6.30 ರಿಂದ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಇವರಿಂದ ನರಕಾಸುರ- ವಧೆ ಗರುಡ-ಗರ್ವಭಂಗ ಯಕ್ಷಗಾನ ಪ್ರದರ್ಶನ ನಡೆಯಿತು