Home » ನಾಳೆ ಶ್ರೀರಾಮ ಮಂದಿರ ಲೋಕಾರ್ಪಣೆ
 

ನಾಳೆ ಶ್ರೀರಾಮ ಮಂದಿರ ಲೋಕಾರ್ಪಣೆ

by Kundapur Xpress
Spread the love

ಅಯೋಧ್ಯೆ ಎಂದಾಗ ಮೊದಲು ನೆನಪಾಗುವುದು ಶ್ರೀರಾಮ. ಶ್ರೀ ರಾಮ ಮರ್ಯಾದ ಪುರುಷೋತ್ತಮ, ಅಸಂಖ್ಯಾತ ಭಕ್ತರ ಆರಾಧ್ಯ ದೈವ, ಎಲ್ಲರ ಆದರ್ಶ ಪುರುಷ, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಗೆ  ಬದುಕಬೇಕೆಂದು ಉಪದೇಶಿಸಿದ್ದನು ಅದೇ ರೀತಿ  ಜಗತ್ತಿಗೆ  ಬದುಕಿ ತೋರಿಸಿದ ಮಹಾನುಭಾವ. ಅಯೋಧ್ಯೆ ಶ್ರೀರಾಮ ಜನ್ಮಭೂಮಿ. ಅಯೋಧ್ಯೆಯ ರಾಮನ ವಿಗ್ರಹದ ಪ್ರತಿಷ್ಠಾಪನೆಯು ಜನವರಿ 22 ರಂದು ನಡೆಯಲಿದ್ದು ಇಡೀ ಭಾರತದಾದ್ಯಂತ  ಹಬ್ಬದ ಸಂಭ್ರಮದ ವಾತಾವರಣ ಸರಯು ನದಿಯು  ತನ್ನ ಒಡಲಲ್ಲಿರುವ  ಶ್ರೀ ರಾಮನು ಮತ್ತೆ  ಹಸನ್ಮುಖಿಯಾಗಿ ಅಯೋಧ್ಯೆಗೆ  ಬಂದ ಭಾವದಿಂದ ಪ್ರಶಾಂತವಾಗಿ ಹರಿಯುತ್ತಿದ್ದಾಳೆ. ಮೋಕ್ಷದಾಯಕ ಸಪ್ತ ನಗರಗಳಲ್ಲಿ ಮೊದಲನೇ ನಗರವೇ ಅಯೋಧ್ಯೆ. ಯುದ್ಧದ ಕಲ್ಪನೆಯನ್ನು ಮಾಡದ ಶಾಂತಪ್ರಿಯವಾದ ನಗರವಾಗಿ ಇರಬೇಕೆಂಬ ರೀತಿಯಲ್ಲಿ  ಈ ನಗರವನ್ನು ಅಯೋಧ್ಯೆ ಎಂದು ನಾಮಕರಣ ಮಾಡಲಾಯಿತು. ಮನುವಿನಿಂದ  ನಿರ್ಮಾಣವಾದ ನಗರ ಅಯೋಧ್ಯೆ ಎಂದು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಇಕ್ವಾಕುವಂಶವನ್ನು  ರಘುವಂಶವನ್ನಾಗಿಸಿದ  ರಾ ರಘುವಿನ ರಾಜಧಾನಿ  ಅಯೋಧ್ಯೆ ರಾಜ  ದಶರಥನು  ಮಕ್ಕಳನ್ನು ಪಡೆಯಲು  ಯಾಗ ಮಾಡಿದ ಸ್ಥಳ ಅಯೋಧ್ಯೆ . ಸ್ವತಃ ಭಗವಾನ್ ವಿಷ್ಣು ರಾಮ ಅವತಾರ  ರೂಪದಲ್ಲಿ ಬಂದು  ಸರ್ವರಿಗೂ ಆದರ್ಶವಾಗಿ ಮರ್ಯಾದ ಪುರುಷೋತ್ತಮನಾಗಿ  ರಾಜನಾಗಿ ಆಳಿದ ಸ್ಥಳ ಅಯೋಧ್ಯೆ. ಅಯೋಧ್ಯೆಗೆ ಕಾಲಿಡುತ್ತಿದ್ದಂತೆ ಮೈ ಮನಸುಗಳು ರೋಮಾಂಚನಗೊಳ್ಳುತ್ತವೆ ಶ್ರೀ ರಾಮನ ಪಾದ ಧೂಳಿನಿಂದ ಪುನೀತವಾದ ನಗರವನ್ನು ಮತ್ತೆ ಮತ್ತೆ ಸಂದರ್ಶಿಸಬೇಕೆನಿಸುತ್ತದೆ. ಅಯೋಧ್ಯೆಯ ರಾಮನ  ಮೂರ್ತಿಯನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ದಶರಥ ಕುವರಿ ಶಾಂತಾದೇವಿಯನ್ನು  ಋಷ್ಯಶೃಂಗರು ವರಿಸಿದ ಸ್ಥಳ ಅಯೋಧ್ಯೆ. ವಿಷ್ಣುವಿನ  ಶೀರ್ಷ ಸ್ಥಾನ  ಎಂದು ಅಯೋಧ್ಯೆಯನ್ನು ಹೇಳಲಾಗುತ್ತದೆ. ರಘುವಂಶದಲ್ಲಿ 65ನೇ   ರಾಜನೇ ಪ್ರಭು ಶ್ರೀರಾಮಚಂದ್ರ ಸಗರ, ಸತ್ಯ ಹರಿಶ್ಚಂದ್ರ, ಭಗೀರಥರಂತಹ ಪ್ರಸಿದ್ಧ ರಾಜರನ್ನು ಒಳಗೊಂಡಿತ್ತು  ಅಯೋಧ್ಯೆ ನಗರ. ಅಯೋಧ್ಯೆ ಜೈನ ಪಂಥದವರಿಗೂ ಪರಮ ಶ್ರದ್ಧಾ ಕೇಂದ್ರ  ಆಗಿತ್ತು. ಜೈನರ 24 ತೀರ್ಥಂಕರಲ್ಲಿ 22  ಜನ  ಸೂರ್ಯವಂಶದವರು. ಆದಿನಾಥನಿಗೆ ಜ್ಞಾನೋದಯವಾದದ್ದು ಅಯೋಧ್ಯೆಯ  ಬಳಿಯಲ್ಲಿ ಈ ಕಾರಣಕ್ಕಾಗಿ ಜೈನರಿಗೂ ಕೂಡ  ಅಯೋಧ್ಯೆ ಶ್ರದ್ಧಾ ಕೇಂದ್ರ ರಾಜ ವಿಕ್ರಮಾದಿತ್ಯನ ಸಮಯದಲ್ಲಿ  ಅಯೋಧ್ಯೆ ಉತ್ತಮ ಸ್ಥಿತಿಗೆ ತಲುಪಿತ್ತು

ರಾಜ ವಿಕ್ರಮಾದಿತ್ಯನು ಶ್ರೀರಾಮ ಮಂದಿರವನ್ನು ಅಯೋಧ್ಯೆಯಲ್ಲಿ ಸ್ಥಾಪಿಸಿದ . ದಾಳಿಗೆ ಒಳಗಾಗಿ ಕೆಡವಲ್ಪಟ್ಟ ಅಯೋಧ್ಯೆ ಮಂದಿರ ಮತ್ತೆ ಭವ್ಯ ಮಂದಿರವಾಗಿ ತಲೆ ಎತ್ತಿದೆ. ಅಯೋಧ್ಯೆಯ ಕಥೆಯೇ ಒಂದು ಇತಿಹಾಸ. ಇಲ್ಲಿ ಶ್ರೀರಾಮನ ಆದರ್ಶವಿದೆ. ಹನುಮಂತನ ಭಕ್ತಿ  ಇದೆ,ಲಕ್ಷ್ಮಣ , ಭರತ , ಶತ್ರುಘ್ನರ ಸಹೋದರತ್ವವಿದೆ. ಸೀತಾಮಾತೆಯ  ಪತಿವ್ರತ ಧರ್ಮವಿದೆ. ಶ್ರೀ ರಾಮನ ಜೀವನ ಕಾಲ್ಪನಿಕ ಕಥೆಯಲ್ಲ ಅದು ಅಯೋಧ್ಯೆಯಲ್ಲಿ ಜ್ವಲಂತವಾಗಿ ನಡೆದ  ಅದ್ಭುತ ದೈವಿಕ ಘಟನೆಗಳ ಮಹಾಪುರಾಣ. ಅದನ್ನೇ ರಾಮಾಯಣ ಎನ್ನಲಾಗುತ್ತದೆ.  ಅಹಲ್ಯೆ , ಶಬರಿವಿಭೀಷಣ, ಹನುಮಂತ, ಜಟಾಯು ಸುಗ್ರೀವ, ಜಾಂಬವಂತ ಶ್ರೀ ರಾಮನ ದೈವಿಕ ಗುಣವನ್ನು ಕಂಡವರು ಮತ್ತೆ  ಅಯೋಧ್ಯೆಯಲ್ಲಿ ಶ್ರೀರಾಮ ಬಂದಿದ್ದಾನೆ. ಮತ್ತೆ ವಿಶ್ವದೆಲ್ಲೆಡೆ  ಶಾಂತಿ ನೆಲೆಸಲಿ ರಾಮ ರಾಜ್ಯ ಸ್ಥಾಪನೆಯಾಗಲಿ ಎಂಬುದೇ  ನಮ್ಮೆಲ್ಲರ ಆಶಯ. ಶ್ರೀರಾಮ ಹಾಕಿ ಕೊಟ್ಟಂತಹ ಪಥದಲ್ಲಿ  ನಾವೆಲ್ಲ ನಡೆಯೋಣ ಮತ್ತೆ ಹೊಸ ಯುಗಕ್ಕೆ  ನಾಂದಿ ಹಾಡೋಣ

ಪ್ರದೀಪ್‌, ಚಿನ್ಮಯಿ ಅಸ್ಪತೆ, ಕುಂದಾಪುರ

   

Related Articles

error: Content is protected !!