ಕಾಳಿಬೆಟ್ಟು ಶ್ರೀ ನಾಗಬೊಬ್ಬರ್ಯ ದೇವಸ್ಧಾನ
ಕುಂದಾಪುರ: ನಗರದ ಸಂತೆ ಮಾರ್ಕೇಟ್ ಹತ್ತಿರವಿರುವ ಕಾಳಿಬೆಟ್ಟು ಶ್ರೀ ನಾಗಬೊಬ್ಬರ್ಯ ದೇವಸ್ಧಾನದ 11ನೇ ವರ್ಷದ ಪ್ರತಿಷ್ಠಾವರ್ಧಂತ್ಯೋತ್ಸವವು ಫೆ.9 ರಂದು ಜರಗಲಿರುವುದು.
ದಿನಾಂಕ 09.02.2023ನೇ ಗುರುವಾರ ಬೆಳಿಗ್ಗೆ 8 ಗಂಟೆಗೆ ಶ್ರೀ ಕಾಳಿ ದೇವರಿಗೆ ರಜತ ಪ್ರಭಾವಳಿ ಸಮರ್ಪಣೆ ಇದ್ದು ಆ ಪ್ರಯುಕ್ತ ಕಲಾಶಾಭಿಶೇಕ ಮಹಾಪೂಜೆ ಮಹಾ ಮಂಗಳಾರತಿಯೊಂದಿಗೆ ಮಹಾ ಅನ್ನಸಂರ್ತಪನೆ ನಡೆಯಲಿದೆ.
ರಾತ್ರಿ ಗಂಟೆ 7.00ಕ್ಕೆ ಶ್ರೀ ಕಾಳಿ ಹಾಗೂ ಸಪರಿಹಾರ ದೈವಗಳ ದರ್ಶನ ಹಾಗೂ ಗೆಂಡ ಮಹೋತ್ಸವ ನಡೆಯಲಿದೆ. ರಾತ್ರಿ ಗಂಟೆ 9.00 ರಿಂದ ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಮಡಾಮಕ್ಕಿ ಇವರಿಂದ ಪಂಚಗಿರಿ-ಪಂಜುರ್ಲಿ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.
ಎಲ್ಲಾ ದೇವತಾ ಕಾರ್ಯಗಳಿಗೂ ಭಕ್ತರು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯ ಗೌರವ ಅಧ್ಯಕ್ಷರಾದ ಕೆ.ರಾಮನಾಥ ನಾಯ್ಕ್ ಅಧ್ಯಕ್ಷರಾದ ಎಸ್.ಜನಾರ್ಧಾನ್ ಕಾರ್ಯದರ್ಶಿ ಗಣೇಶ್ ನಡುಮನೆ ಹಾಗೂ ಹಿರಿಯ ಸಲಹೆಗಾರರಾದ ಕೆ ಸೂರ್ಯಕಾಂತ್ ದಿವಾಕರ್ ಕಡ್ಗಿಯವರು ವಿನಂತಿಸಿಕೊಂಡಿದ್ದಾರೆ
ಅಧ್ಯಕ್ಷರಾದ ಎಸ್.ಜನಾರ್ಧಾನ್