ಕುಂದಾಪುರ : ಕುಂದಾಪುರ ತಾಲೂಕಿನ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನದಲ್ಲಿ ಇಂದು ಚಂಪಾ ಷಷ್ಠಿ ಮತ್ತು ನಾಳೆ ನಾಗಮಂಡಲೋತ್ಸವ ಸೇವೆ ನಡೆಯಲಿದೆ
ನಿನ್ನೆ ಕೃಷ್ಣ ಸೋಮಯಾಜಿಯವರ ನೇತೃತ್ವದಲ್ಲಿ ಬೆಳಗ್ಗೆ 9 ಗಂಟೆಗೆ ಕಾಳಿಂಗ ದೇವರಿಗೆ ನವ ಕುಂಭ ಸ್ನಪನ ಹಾಗೂ ಮಹಾಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ ಮುಂದಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು
ಇಂದು ಷಷ್ಠಿಯ ಅಂಗವಾಗಿ ಪ್ರಾತಕಾಲ 4.30ಕ್ಕೆ ಅಭಿಷೇಕ, ಪಂಚಾಮೃತ ಸೇವೆ, ಮಂಗಳಾರತಿ, ಪ್ರಾತಕಾಲ 5 ಗಂಟೆಗೆ ಹೆಣ್ಣು ಕಾಯಿ, ಹೂವು ಕಾಯಿ, ಆರತಿ, ದೇವರ ದರ್ಶನ, ತೀರ್ಥ ಪ್ರಸಾದ ವಿತರಣೆ ಜರುಗಲಿದೆ. ಬೆಳಗ್ಗೆ 7 ಗಂಟೆಯಿಂದ ವೇದ ಪಾರಾಯಣ, ಬೆಳಗ್ಗೆ 10 ಗಂಟೆಗೆ, ಮಡೆ ಪ್ರದಕ್ಷಿಣೆ (ಉರುಳು ಸೇವೆ) ನಡೆಯಲಿದ್ದು ಮಧ್ಯಾಹ್ನ 12 ಗಂಟೆಗೆ ಕಲಶಾಭಿಷೇಕ, ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ ಸಂಜೆ 7ರಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8.30ಕ್ಕೆ ಮಹಾಲಿಂಗೇಶ್ವರ ದೇವರಿಗೆ ರಂಗ ಪೂಜೆ ನಡೆಯಲಿದೆ
ಡಿ.19ರಂದು ಬೆಳಗ್ಗೆ 6.30ಕ್ಕೆ ಹಾಲುಹಿಟ್ಟಿನ ಸೇವೆ, ಬೆಳಗ್ಗೆ 9.00 ರಿಂದ ಕಟ್ಟುಕಟ್ಟಳೆಯ ನಾಗಮಂಡಲೋತ್ಸವ, ಬೆಳಗ್ಗೆ 11.00 ರಿಂದ ತುಲಾಭಾರ ಸೇವೆ ಸಂಜೆ ಶ್ರೀಕ್ಷೇತ್ರ ಪ್ರದಕ್ಷಿಣೆ, ಕ್ಷೇತ್ರ ಪಾಲನಿಗೆ ಪೂಜೆ, ಭೂತರಾಜನಿಗೆ ಸೇವೆ, ರಾತ್ರಿ 7.00 ರಿಂದ ಹಾಲಾಡಿ ಮೇಳದವರಿಂದ ಯಕ್ಷಗಾನ ಬಯಲಾಟ ಜರುಗಲಿದೆ ಎಂದು ದೇವಳದ ವ್ಯವಸ್ಥಾಪನಾ ಮಂಡಳಿ ಮಂಡಳಿ ಅಧ್ಯಕ್ಷರಾದ ಎಸ್. ಚಂದ್ರಶೇಖರ ಹೆಗ್ಡೆ ತಿಳಿಸಿದ್ದಾರೆ